ಕೃತಿ ಕೇಂದ್ರಿತ

Author : ಚಂದ್ರಶೇಖರ ಪಾಟೀಲ (ಚಂಪಾ)

Pages 192

₹ 130.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ವಿಮರ್ಶಾ ಬರಹಗಳ ಸಂಕಲನ ʼಕೃತಿ ಕೇಂದ್ರಿತʼ. ಕವಿ ಚಂದ್ರಶೇಖರ ಪಾಟೀಲರ ಅನಂತಮೂರ್ತಿ-ಲಂಕೇಶ-ಚಿತ್ತಾಲ-ವಾಲೀಕರ ಕುರಿತ ʼಚಂಪಾ ಕಾಲಂʼ ಅಂಕಣದ 41 ಲೇಖನಗಳ ಸಂಗ್ರಹ ಈ ಕೃತಿ. ಸಪ್ನ ಬುಕ್‌ ಹೌಸ್‌ ಪ್ರಕಟಿಸಿರುವ ಕೃತಿಯು 2021 ರಲ್ಲಿ ಎರಡನೇ ಮುದ್ರಣ ಕಂಡಿದೆ. ಅನೇಕ ಲೇಖಕರ ಕೃತಿಗಳ ಮುನ್ನುಡಿ-ಹಿನ್ನುಡಿ-ವಿಮರ್ಶೆಗಳ ಸಂಗ್ರಹವೇ ವಿಮರ್ಶಾ ಬರಹಗಳ ಸಂಕಲನವಾಗಿದೆ.

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books