‘ಕರ್ನಾಟಕದ ಆರಂಭಿಕ ಶಿಲ್ಪಕಲೆ’ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿದ ಸುವರ್ಣ ಕರ್ನಾಟಕ ಶಿಲ್ಪಕಲಾ ಮಾಲೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯ ಸಂಪಾದಕರು ಎಚ್.ಎಸ್. ಗೋಪಾಲ ರಾವ್ ಹಾಗೂ ಆರ್. ಎಚ್. ಕುಲಕರ್ಣಿ. ಕೃತಿಯಲ್ಲಿ ಪ್ರಾಗೈತಿಹಾಸಿಕ ಕಾಲದ ಕಲಾ ಚಟುವಟಿಕೆಗಳು, ಇತಿಹಾಸ ಆರಂಭ ಕಾಲದ ಶಿಲ್ಪಕಲೆ, ಸನ್ನತಿಯ ಬೌದ್ಧ ಶಿಲ್ಪಗಳು, ಸಾತವಾಹನ ಕಾಲದ ಶಿಲ್ಪಕಲೆ, ಬನವಾಸಿ ಪ್ರದೇಶದ ಶಿಲ್ಪಕಲೆ, ಬನವಾಸಿ ಕದಂಬರ ಕಾಲದ ಶಿಲ್ಪಕಲೆ, ಉಪಸಂಹಾರ ಪರಾಮರ್ಶನ ಗ್ರಂಥಗಳು ಚಿತ್ರಗಳು, ಸೇರಿದಂತೆ ಹಲವು ಮಹತ್ವದ ವಿಚಾರಗಳ ವಿವರಣೆಗಳಿವೆ. ಇತಿಹಾಸ ಪೂರ್ವ ಮತ್ತು ಇತಿಹಾಸ ಅರಂಭ ಕಾಲದ ಶಿಲ್ಪ ಕಲೆಯ ಬಗ್ಗೆ ಬರೆದುಕೊಟ್ಟವರು ಅದೇ ವಿಷಯವನ್ನು ಕುರಿತು ಸಂಶೋಧನೆ ಮಾಡಿರುವ ಕಲಾ ಇತಿಹಾಸಕಾರ ಡಾ. ಆರ್. ಎಚ್. ಕುಲಕರ್ಣಿ ಈ ಕೃತಿಯನ್ನೂ ಅರ್ಥಪೂರ್ಣವಾಗಿ ರಚಿಸಿದ್ದಾರೆ.
©2024 Book Brahma Private Limited.