ವಿದ್ವಾಂಸ ವಿದ್ಯಾಭೂಷಣ ಅವರು ರಾಗ ಸಂಯೋಜಿಸಿ ಗಾಯನ ಮಾಡಿದ ಕನಕದಾಸರ ಕೀರ್ತನೆಗಳನ್ನು ಸಂಗ್ರಹಿಸಿದ ಕೃತಿ-ಜನಪ್ರಿಯ ಕನಕದಾಸರ ಕೀರ್ತನೆಗಳು. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದವರು. ಭಕ್ತಿಯು ಭಕ್ತನೊಬ್ಬನ ಆತ್ಮ ಸಾಮರ್ಥ್ಯ, ಧೀಮಂತ ಶಕ್ತಿ ಎಂದು ತೋರಿದವರು. ಅವರ ಕೀರ್ತನೆಗಳು ಕೇವಲ ಭಕ್ತಿಗೀತೆಗಳಲ್ಲ; ಅವು ದೇವರನ್ನು ತಲುಪಲು ಇರುವ ಸುಲಭ ಮಾರ್ಗಗಳು ಹಾಗೂ ಸಮಾಜದಲ್ಲಿ ಭಕ್ತನೊಬ್ಬ ಹೇಗೆ ಬದುಕಬೇಕು. ಆ ಮೂಲಕ ಸಮಾಜದ ಆರೋಗ್ಯವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂದು ಉಪದೇಶ ನೀಡಿದವರು.
©2024 Book Brahma Private Limited.