ಹರಿದಾಸ ಪರಂಪರೆಯಲ್ಲಿ ಆನೇಕ ದಾಸವರೇಣ್ಯರು ತಾವು ನಂಬಿದ್ದ ತತ್ವ ಸಿದ್ಧಾಂತವನ್ನು ಪ್ರಚಾರ ಮಾಡುವುದಕ್ಕೆ ಪರಿಕತೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಮಾಧ್ವ ಸಿದ್ಧಾಂತವನ್ನು ಸರಳವಾಗಿ ಜನರಿಗೆ ತಿಳಿಸುವುದಕ್ಕೆ ಹರಿಕಥೆಯನ್ನು ಬಳಸಿಕೊಂಡವರಲ್ಲಿ ಯಲಿಯೂರು ಶ್ರೀವೆಂಕಟಾಚಲದಾಸರೂ ಪ್ರಮುಖರು. ಅವರು ಹರಿಕಥೆ ಮಾಡುದಲ್ಲದೆ ಸುಮಾರು 150-200 ಮೇಲಿನ ಕೀರ್ತನೆಗಳನ್ನು ರಚಿಸಿದ್ದರೆಂದು ಅವರ ಕುಟುಂಬಸ್ಥರಿಂದ ತಿಳಿದುಬಂದಿದೆ. ಕರ್ನಾಟಕದಾದ್ಯಂತ ಹರಿದಾಸ ಅವರ ಕೆಲವು ಕೀರ್ತನೆಗಳನ್ನು ದಿನನಿತ್ಯ ಹೇಳಿಕೊಳ್ಳುವುದೂ ಇದೆ. ಆದರೆ ಈ ಕೀರ್ತನೆಗಳನ್ನು ಶ್ರೀವೆಂಕಟಾಚಲದಾಸರು ರಚಿಸಿದ್ದರೆಂದು ಯಾರಿಗೂ ತಿಳಿದಿಲ್ಲ, ಅಷ್ಟರ ಮಟ್ಟಿಗೆ ಅವರು ಅಪ್ರಚಲಿತರಾಗಿದ್ದಾರೆ. ಈ ಮಹನೀಯರ ಬದುಕು ಮತ್ತು ಹರಿದಾಸ ಸಾಹಿತ್ಯಕ್ಕೆ, ಹರಿಕಥಾ ಕ್ಷೇತ್ರಕ್ಕೆ ಅವರು ಮಾಡಿರುವ ಅಪಾರ ಕೊಡುಗೆಯನ್ನು ಪರಿಚಯಿಸುವುದು ಈ ಕಿರು ಪುಸ್ತಕದ ಉದ್ದೇಶವಾಗಿದೆ.
©2024 Book Brahma Private Limited.