.ವಿದ್ಯಾಭೂಷಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಶಾಸ್ತ್ರೀಯ ಸಂಗೀತಗಾರರು. ಪ್ರಮುಖವಾಗಿ ಹರಿದಾಸ ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತಿ ಗೀತೆಗಳ ಗಾಯನ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು. ತನು ನಿನ್ನದು ಜೀವನ ನಿನ್ನದು ಹಾಗೂ ದಾಸರ ಪದಗಳು ಹೀಗೆ ಎರಡು ಧ್ವನಿ ಸುರಳಿಗಳನ್ನು ತಂದಿದ್ದಾರೆ. 1994ರಲ್ಲಿ ಸಂಗೀತ ವಿದ್ಯಾ ನಿಧಿ ಎಂಬ ಗೌರವ ದೊರಕಿದೆ. ಹಂಪಿಯ ಕನ್ನಡ ವಿ.ವಿ.ಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಭಕ್ತಿ ಭಾರತಿ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯರಾಗಿದ್ದು, ಆ ಮೂಲಕ ಭಕ್ತಿ ಗಾಯನವನ್ನು ಪ್ರಸಿದ್ಧಿ ಪಡಿಸಿದರು. ‘ನೆನಪೇ ಸಂಗೀತ’ ಎಂಬುದು ಇವರ ಆತ್ಮಕಥೆ. ಜನಪ್ರಿಯ ಕನಕದಾಸರ ಕೀರ್ತನೆಗಳು (ರಾಗ ಸಂಯೋಜಿಸಿ ದ ಕೀರ್ತನೆಗಳ ಸಂಗ್ರಹ ಕೃತಿ)