‘ದಾಸರ ದಾರಿಯಲ್ಲಿ’ ಎಫ್ ಡಿ ಗಡ್ಡಿ ಗೌಡರ ಕೃತಿಯಾಗಿದೆ.ದಾಸರು ಶ್ರೇಷ್ಠ ದಾರ್ಶನಿಕರು ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿದವರು. ಜಗದ ಅಂಕುಡೊಂಕುಗಳನ್ನು ತಿದ್ದಿತೀಡಿ ಅರೋಗ್ಯಪೂರ್ಣ ಸಮಾಜದ ರಚನೆಗೆ ಮುಂದಾಗಿ ಅವಿಶ್ರಾಂತಿ ಶ್ರಮಿಸಿದವರು. ಆತ್ಮ ಕಲ್ಯಾಣದ ಮೂಲಕ ಸಮಾಜ ಕಲ್ಯಾಣವನ್ನು ಬಯಿಸಿ ಮಾನವ ಜನ್ಮದ ಸಾರ್ಥಕತೆಗೆ ಬೇಕಾದ ರೀತಿ ನಿಯಮಗಳನ್ನು ತಿಳಿಸಿಕೊಟ್ಟವರು. ಭಕ್ತಿಯನ್ನು ತಮ್ಮ ಪ್ರಮುಖ ಮಾರ್ಗವಾಗಿಸಿಕೊಂಡ ಅವರು ಭವ ಬಂಧನದಿಂದ ಬಿಡುಗಡೆಯಾಗಿ ಪರಮ ಸುಖ ಪಡೆಯಲು ಹೋರಾಡಿದವರು. ಅಷ್ಟೇ ಅಲ್ಲದೆ, ಆತ್ಮ ನಿವೇದನೆ, ವೈರಾಗ್ಯ ಭಾವ, ಲೋಕ ನೀತಿ ತತ್ವಗಳನ್ನು ಸಾರಿ ಸಾಮಾಜಿಕ ವಿಡಂಬನೆಯ ಮೂಲಕ ಅಂಧ ಹಾಗೂ ಹೀನ ಸಂಪ್ರದಾಯಗಳನ್ನು ಬಹುವಾಗಿ ಖಂಡಿಸಿ ವೈಚಾರಿಕ ಸತ್ಯವನ್ನು ಪ್ರತಿಪಾದಿಸಿದವರು. ಈಜಬೇಕು ಇದ್ದು ಜಯಿಸಬೇಕು, ಮಾನವ ಜನ್ಮ ದೊಡ್ಡದು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ, ಕುಲ ಕುಲವೆಂದು ಹೊಡೆದಾಡುವಿರಿ, ಎಲ್ಲರು ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಮುಂತಾದ ನೀತಿಯ ನುಡಿಗಳು ಮಾನವ ಜನ್ಮದ ಆತ್ಮಸಾಕ್ಷಾತ್ಕಾರದ ದೀಪವಾಗಿದ್ದಾವೆ.
©2024 Book Brahma Private Limited.