ಹೊಯ್ಸಳ ವಾಸ್ತುಶಿಲ್ಪ -ಚಿಂತಕ ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರ ಸಂಶೋಧನಾತ್ಮಕ ಕೃತಿ. ಕರ್ನಾಟಕದ ಇತಿಹಾಸದಲ್ಲಿ ಹೊಯ್ಸಳ ಅರಸು ಮನೆತನಕ್ಕೆ ತನ್ನದೇ ಆದ ಸ್ಥಾನವಿದೆ. ರಾಜ್ಯ ವಿಸ್ತರಣೆಗಿಂತ ಕಲಾತ್ಮಕವಾಗಿ ನಾಡನ್ನು ಶ್ರೀಮಂತಗೊಳಿಸುವಲ್ಲಿ ಹೊಯ್ಸಳ ಅರಸು ವಂಶ ಪ್ರಸಿದ್ಧಿ ಪಡೆದಿದೆ. ಅದಕ್ಕೆಂದೇ ಹೊಯ್ಸಳ ವಾಸ್ತುಶಿಲ್ಪವನ್ನು ಇತಿಹಾಸದ ವಿಶೇಷ ಭಾಗವಾಗಿ ಅಧ್ಯಯನ ಮಾಡಲಾಗುತ್ತಿದೆ. ಕಲೆಗೆ ಹೊಯ್ಸಳರು ನೀಡಿದ ಪ್ರಾಮುಖ್ಯತೆಯು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಯೂ ಆಗಿದೆ. ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು, ಸೋಮನಾಥಪುರ ಹೀಗೆ ವಿವಿಧೆಡೆ ಇರುವ ಕಲಾ ವೈಭವವು ಹೊಯ್ಸಳರ ಕಲೆ ಪ್ರೀತಿಗೆ ಕನ್ನಡಿ ಹಿಡಿಯುತ್ತವೆ. ಬೇಲೂರು, ಹೊಯ್ಸಳರ ರಾಜಧಾನಿ ಆಗಿತ್ತು. ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ ಆಗಿದೆ. ಈ ಕುರಿತ ಐತಿಹಾಸಿಕ ಮಾಹಿತಿ ಒಳಗೊಂಡ ಕೃತಿ ಇದು.
©2024 Book Brahma Private Limited.