ಛಂದೋಮಿತ್ರ

Author : ಅ.ರಾ. ಮಿತ್ರ

Pages 220

₹ 120.00




Year of Publication: 2014
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಅ.ರಾ. ಮಿತ್ರ ಅವರ ಕೃತಿ ಛಂದೋಮಿತ್ರ . ರಾ. ಗಣೇಶ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಹನ್ನೊಂದನೆಯ ಶತಮಾನದ ಕೊನೆಯಲ್ಲಿದ್ದ ಕಾಶ್ಮೀರದ ಕವಿ ಕ್ಷೇಮೇಂದ್ರನು ತನ್ನ ವಿದ್ಯಾರ್ಥಿಗಳ ಸೌಕಯ್ಯಕ್ಕಾಗಿ ಲಲಿತ ಶೈಲಿಯಲ್ಲಿ ಸೊಗಸಾದ ವೃತ್ತ ಪ್ರಭೇದಗಳನ್ನು ಪ್ರಯೋಗಿಸುವ ಬಗೆಯನ್ನು ತಿಳಿಸಿದ್ದ ಸುವೃತ್ತತಿಲಕವೆಂಬ ಚಿಕ್ಕಚೊಕ್ಕ ಕೃತಿಯ ಬಳಿಕ ಇಂದು ಪ್ರೊ| ಅ.ರಾ. ಮಿತ್ರ ಅಂಥದ್ದೇ ಪ್ರಯತ್ನ ವನ್ನು “ಛಂದೋಮಿತ್ರ'ದ ಮೂಲಕ ಮಾಡಿ ಸಫಲರಾಗಿದ್ದಾರೆ. ಇದು ಕನ್ನಡಕ್ಕೆ ಹೆಮ್ಮೆತರುವ ವಿಷಯ.ಛಂದೋಮಿತ್ರದ ವೈಶಿಷ್ಟ್ಯ ಹಲವು ಬಗೆಯದು. ಆಧುನಿಕ ವಿದ್ವಾಂಸರ ಸಂಶೋಧನೆಯಂತೆ ತಿಳಿಸಬೇಕಾದ ವಸ್ತುವಿಗೆ ಆ ವಸ್ತುವನ್ನೇ ಬೋಧನ ಮಾಧ್ಯಮವನ್ನಾಗಿ ಮಾಡಿಕೊಂಡರೆ ಪರಿಣಾಮಕಾರಿಯಾದ ಸಂವಹನ ಸಾಧ್ಯ. ಇದನ್ನು ಮನಗಂಡುದರ ಸೊಗಸೇ ಛಂದೋಮಿತ್ರದ ಶರೀರ ವಿನ್ಯಾಸ, ಪೂರ್ಣವಾಗಿ ತಿಳಿಗನ್ನಡದ ಬಗೆಬಗೆ ಛಂದಸ್ಸಿನ ಪದ್ಯಗಳಲ್ಲಿಯೇ ಸಮಸ್ತ ವಿಚಾರವನ್ನೂ ಅಭ್ಯಾಸಿಗಳ ಆಳವರಿತು ಹೇಳುವ ಕಲೆ ಅನನ್ಯ. ಇದರಿಂದಾಗಿ ಓದುತ್ತಲೇ ಪದ್ಯ ರಚಿಸುವ ಯಾರಿಗಾದರೂ ಆಗುತ್ತದೆ. ಆಶ್ಚರ್ಯಕರವಲ್ಲದಿದ್ದರೂ ವಿಸ್ಮಯಾವಹವಾದ ಮನವರಿಕೆಯೂ ಆಗುತ್ತದೆ. ಓಹ್! ಛಂದಸ್ಸು ಇಷ್ಟು ಸುಲಭವೇ! ಇಷ್ಟು ಸೊಗಸೇ!! ಎಂದು ಹೇಳಿದ್ದಾರೆ.

About the Author

ಅ.ರಾ. ಮಿತ್ರ
(25 February 1935)

ಪ್ರೊ.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು (ಅ.ರಾ.ಮಿತ್ರ) 1935ರ ಫೆಬ್ರುವರಿ 25 ರಂದು ಜನಿಸಿದರು. ಕನ್ನಡ ಉಪನ್ಯಾಸಕರಾಗಿಯೂ,  ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ.  ಶಾಸ್ತ್ರ ಸಾಹಿತ್ಯ ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ. ಪ್ರಬಂಧ ಸಂಕಲನ: ಬಾಲ್ಕನಿಯ ಬಂಧುಗಳು ಯಾರೊ ಬಂದಿದ್ದರು, ಸಂಕಲ್ಪಗಳು, ನಾನೇಕೆ ಕೊರೆಯುತ್ತೇನೆ, ಆರತಕ್ಷತೆ, ವ್ಯಕ್ತಿ ಪರಿಚಯ:  ಕೈಲಾಸಂ, ಹಿರಿಯಡ್ಕ ರಾಮರಾಯ ಮಲ್ಯ ವಿಮರ್ಶೆ:  ವಚನಕಾರರು ಮತ್ತು ಶಬ್ದಕಲ್ಪ ಸಂಪಾದನೆ : ಲಲಿತ ಪ್ರಬಂಧಗಳು (ಇತರರೊಡನೆ) ಅಜಿತ ಪುರಾಣ ಸಂಗ್ರಹ, ಪಂಪಭಾರತ, ಗ್ರಹ ಪುರಂದರ ...

READ MORE

Related Books