ಹಬ್ಬುವ ಬಳ್ಳಿಗೆ ಬಿಡುವ ಕಾಯಿ, ಹೂವು ಸೇರಿದಂತೆ ಇತರೆ ತರಕಾರಿಗಳ ಮಾಹಿತಿಯನ್ನು ವಿವರವಾಗಿ ಚರ್ಚಿಸಿದ ಕೃತಿ-ಬಳ್ಳಿ ತರಕಾರಿಗಳು. ಡಾ. ಪಿ. ನಾರಾಯಣ ಸ್ವಾಮಿ ಹಾಗೂ ಡಾ. ಎಲ್. ವಸಂತ ರಚಿಸಿದ್ದಾರೆ. ಹಾಗಲಕಾಯಿ, ಸೌತೇಕಾಯಿ, ತೊಂಡೇಕಾಯಿ, ಕಲ್ಲಂಗಡಿ ಹೀಗೆ ವಿವಿಧ ತೆರನಾದ ತರಕಾರಿಗಳು ಹಾಗೂ ಅವುಗಳ ಪೌಷ್ಟಿಕತೆ, ಆರೋಗ್ಯಕ್ಕೆ ಹಿತವಪ್ಪುವಂತಹದ್ದರ ಕುರಿತ ಸೂಕ್ತ ಮಾಹಿತಿಯನ್ನು ಈ ಕೃತಿಯಿಂದ ಪಡೆಯಬಹುದು. ಈ ಕೃತಿಗೆ ಧಾರವಾಡ ಕೃಷಿ ವಿ.ವಿ. ಕನ್ನಡ ಸಂಘದ ಪಂಚವಾರ್ಷಿಕ ‘ಕೃಷಿ ಸಾಹಿತ್ಯ ಶ್ರೀ’ ಪ್ರಶಸ್ತಿ (1994-99) ಲಭಿಸಿದೆ.
©2024 Book Brahma Private Limited.