ಲೇಖಕಿ ಭಾರತಿ ಭಟ್ ಅವರು ಬರೆದ ಕೈಪಿಡಿ ಕೃತಿ ʻಮನೆಗೆಲಸದ ಕೈಪಿಡಿʼ. ಪುಸ್ತಕ ಮನೆ ಕೆಲಸಗಳಿಗೆ ಸಹಾಯಯಾಗುವ ಉಪಕರಣಗಳು, ಅವುಗಳ ಆರೈಕೆ, ಜಾಣ್ಮೆಯಿಂದ ಕೆಲಸ ಮಾಡುವ ಕುರಿತು ಸಲಹೆಗಳನ್ನು ನೀಡುತ್ತದೆ. ಅಗತ್ಯ ವಸ್ತುಗಳು ಕೆಟ್ಟು ಹೋಗದಂತೆ ನೋಡಿಕೊಳ್ಳುವುದು, ಅವುಗಳಿಂದ ಹಣ- ಸಮಯ ಎರಡನ್ನೂ ಉಳಿಸುವುದು, ಅಡುಗೆಗೆ ರುಚಿ ಹೆಚ್ಚಿಸುವುದು ಹಾಗೂ ಮನೆಯವರ ಆರೋಗ್ಯವನ್ನು ಕಾಪಾಡುವುದು ಹೀಗೆ ಮನೆಯ ದಿನನಿತ್ಯದ ಕ್ರಿಯೆಗಳನ್ನು ಅಚ್ಚು ಕಟ್ಟಾಗಿ, ಸುಲಭ ಮಾರ್ಗದಲ್ಲಿ ಮಾಡುವ ವಿಚಾರಗಳನ್ನು ವಿವರವಾಗಿ ಪುಸ್ತಕ ಹೇಳಿಕೊಡುತ್ತದೆ. ಭಾರತಿ ಅವರು ತಮ್ಮ ʻಅಡಿಗೆಯ ಒಳಗುಟ್ಟುʼ ಮತ್ತು ʻಮನೆಗೆಲಸದ ಒಳಗುಟ್ಟುʼ ಎಂಬ ಎರಡು ಪುಸ್ತಕಗಳಲ್ಲಿ ಹೇಳಿರುವ ಹಾಗೂ ತಮ್ಮ ಅನುಭವದ ಹಿನ್ನೆಲೆಯಿಂದ ಹಂಚಿಕೊಂಡ ಕೆಲವು ವಿಷಯಗಳನ್ನು ಒಟ್ಟು ಸೇರಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದೆ.
©2024 Book Brahma Private Limited.