‘ಪುಟ್ಟೀರಮ್ಮನ ಪುರಾಣ’ ಮಿಶ್ರಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕ. ಲೇಖಕಿ ವಿ. ಗಾಯತ್ರಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಅನುಭವದ ನುಡಿಮುತ್ತುಗಳಿಗೆ ಮೊದಲ ಸ್ಥಾನ. ಪುಸ್ತಕದ ಉಪಶೀರ್ಷಿಕೆ ಹೇಳುವಂತೆ ಮುಖ್ಯವಾಗಿ ಮಿಶ್ರಬೆಳೆ ಮತ್ತು ಬೆರಕೆಸೊಪ್ಪಿನ ವಿಸ್ಮಯಲೋಕ ಈ ಕೃತಿಯಲ್ಲಿ ಅನಾವರಣಗೊಂಡಿದೆ. ಪುಟ್ಟೀರಮ್ಮನವರ ಅನುಭವದ ಮಾತುಗಳು ನಮ್ಮ ಹಳೆ ಕೃಷಿ ಪದ್ಧತಿ ಎಷ್ಟು ಸಂಪದ್ಭರಿತವಾಗಿದೆ. ರೈತರನ್ನು ಹೇಗೆ ಸ್ವಾವಲಂಬಿಗಳಾಗಿಸುವ ವಿಧಾನವಾಗಿದೆ ಎಂದು ಪ್ರತ್ಯಕ್ಷಿಸಿ ತೋರಿಸುತ್ತದೆ. ಈ ನೆಲದ ಅಮೂಲ್ಯ ಕೃಷಿ ಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರ ಜ್ಞಾನದ ಹಂಗೂ ಇಲ್ಲದೆ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬಂದಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.