ದೇಶಗಳ ಭವಿಷ್ಯವನ್ನು ನಿರ್ಧರಿಸುವುದು ಅವುಗಳ ನಾಗರಿಕತೆ, ಸಂಸ್ಕೃತಿ, ಭಾಷೆ, ಸೇನೆ ಎಂಬುದಕ್ಕಿಂತ ಹೆಚ್ಚಾಗಿ ಆರ್ಥಿಕತೆ. ಒಂದು ದೇಶದ ಅರ್ಥವ್ಯವಸ್ಥೆ ಎಷ್ಟು ಸದೃಢವಾಗಿದೆ ಎಂಬುದು ಸಂಕಷ್ಟದ ಸನ್ನಿವೇಶವನ್ನು ಆ ದೇಶ ಎಷ್ಟು ತಾಳಿಕೊಳ್ಳುತ್ತದೆ ಎಂಬುದನ್ನು ಆಧರಿಸಿದೆ. ಜಗತ್ತಿನ ಆರ್ಥಿಕ ಪರಿಸ್ಥಿತಿಯಲ್ಲಿ (2021ರಲ್ಲಿ) ವಿವಿಧ ದೇಶಗಳ “ಅರ್ಥ ಆರೋಗ್ಯ” (ಎಕನಾಮಿಕ್ ಹೆಲ್ತ್) ಹೇಗಿದೆ ಎಂಬುದನ್ನು ಸಂಕ್ಷಿಪ್ತವಾಗಿ, ಯಾವ ವಿವರವೂ ಬಿಟ್ಟುಹೋಗದಂತೆ ವಿಶಿಷ್ಟ ರೀತಿಯಲ್ಲಿ ತಿಳಿಸಿಕೊಡುವ ಕೃತಿ ರಂಗಸ್ವಾಮಿ ಮೂಕನಹಳ್ಳಿ ಅವರ ‘ವಿತ್ತಜಗತ್ತಿನ ವರ್ತಮಾನ’. ಈ ಕೃತಿಯು ಕನ್ನಡದ ಓದುಗನಿಗೊಂದು ಅರ್ಥಪೂರ್ಣ ಕೊಡುಗೆಯಾಗಿದೆ. ಇಲ್ಲಿ ಈಗಿನ ಚಿತ್ರಣ ಮಾತ್ರವೇ ಅಲ್ಲದೆ ಇನ್ನು ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ದೇಶಗಳ ಆರ್ಥಿಕ ಆರೋಗ್ಯ ಹೇಗಿರಬಹುದು ಎಂಬ ಮುನ್ಸೂಚನೆಗಳೂ ಇವೆ. ಕೊರಿಯಾ, ಚೀನಾ, ಜಪಾನ್, ಇಂಗ್ಲೆಂಡ್ , ಪೋರ್ಚುಗಲ್, ಬೋಟ್ಸಾನಾದಂಥ ಹತ್ತು ಹಲವು ದೇಶಗಳು ಮುಂದಿನ ದಿನಗಳಲ್ಲಿ ಯಾವ ಹಾದಿ ಹಿಡಿಯಲಿವೆ ಎಂಬ ಬಗ್ಗೆಯೂ ಈ ಕೃತಿಯು ವಿವರಿಸುತ್ತದೆ.
©2024 Book Brahma Private Limited.