‘ಅರ್ಥಶಾಸ್ತ್ರದ ಪರಿಕಲ್ಪನೆಗಳು’ ವಿ.ಕೆ. ತಾಳಿತ್ತಾಯ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಮುನ್ನುಡಿ ಬರಹವಿದೆ; ವಿಜ್ಞಾನ ಮತ್ತು ತತ್ವಜ್ಞಾನ ಒಂದಕ್ಕೊಂದು ನಿಕಟ ಸಂಬಂಧವಿರುವ ವಿಷಯಗಳು ತತ್ವಜ್ಞಾನ ವಿಜ್ಞಾನದ ಕಾರ್ಯಕಲಾಪಗಳನ್ನು ವಿಮರ್ಶೆಗೀಡು ಮಾಡುತ್ತಿದ್ದರೆ ವಿಜ್ಞಾನಿಗಳೂ ತಮ್ಮ ಕೆಲಸದ ಕುರಿತು ತಾತ್ವಿಕ ಚಿಂತನೆಯಲ್ಲಿ ನಿರತರಾಗಿರುವುದೆ ಸರ್ವೆಸಾಮಾನ್ಯ ಈ ಕಿರು ಪುಸ್ತಕ ವಿಜ್ಞಾನ ಮತ್ತು ತತ್ವಜ್ಞಾನಗಳೊಳಗಿನ ಈ ವಿಶಿಷ್ಟ ಸಂಬಂಧದ ಕುರಿತು. ಜನಸಾಮಾನ್ಯರಿಗೆ ಅದರ ಕುರಿತು ಒಂದು ಸಂಕ್ಷಿಪ್ತ ಪರಿಚಯ ಇಲ್ಲಿ ನಾವು ವಿಜ್ಞಾನ-ತತ್ವಜ್ಞಾನದ ವಿವಿಧ ಆಯಾಮಗಳ ಪರಿಚಯ ಮಾಡುತ್ತಿದ್ದರೂ ಓದುಗರು ಅವರವರ ಅಭಿರುಚಿಯಂತೆ ಯಾವ ಅಧ್ಯಾಯವನ್ನೂ ಪ್ರತ್ಯೇಕವಾಗಿ ಓದಬಹುದು. ವಿಜ್ಞಾನ ಮತ್ತು ತತ್ವಜ್ಞಾನ, ಇವೆರಡೂ ಒಂದೇ ಗುರಿಯನ್ನಿಟ್ಟುಕೊಂಡಿರುತ್ತವೆ - ಅದೆಂದರೆ ಸತ್ಯವನ್ನು ಅರಿಯುವುದು, ಮೂಲಭೂತ, ಸರ್ವೋತ್ಕೃಷ್ಟ ಸತ್ಯವನ್ನು ತಿಳಿದುಕೊಳ್ಳುವುದು. ಎಲ್ಲಾ ವಿದ್ಯಮಾನಗಳ ಮೂಲದ ಅರ್ಥವನ್ನು ಅರಿಯುವ ಈ ಗುರಿಯನ್ನು ಅವರು ತಲುಪುತ್ತಾರೋ ಇಲ್ಲವೋ ಎಂಬುವುದು ಮುಖ್ಯವಲ್ಲ ಮಾನವ ಜಾತಿಯ ಮುಖ್ಯ ಲಕ್ಷಣವಾದ ಕುತೂಹಲವೇ ಅವರನ್ನು ಈ ಗುರಿಯತ್ತ ಪಯಣಿಸುವಂತೆ ಪ್ರೇರೆಪಿಸುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.