ಇತಿಹಾಸ ಮತ್ತು ಅರ್ಥಶಾಸ್ತ್ರದ ಸಮನ್ವಯತೆಯ ಮೂಲಕ ಭಾರತದ ವರ್ತಮಾನವನ್ನು ವಿಶ್ಲೇಷಿಸಿದವರಲ್ಲಿ ಇರ್ಫಾನ್ ಹಬೀಬ್ ಪ್ರಮುಖರು. ಅವರ ಸಂಪಾದಕತ್ವದಲ್ಲಿ “ಅಲಿಗರ್ ಹಿಸ್ಟೋರಿಯನ್ಸ್ ಸೊಸೈಟಿ' ಹೊರತಂದಿರುವ “ಎ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ' ಸರಣಿ ಕೃತಿಯನ್ನು ಲೋಕೇಶ್ ಕನ್ನಡಕ್ಕೆ ಸರಳವಾಗಿ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನಸಾಮಾನ್ಯರು, ಇತಿಹಾಸ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳೂ ಓದಬಹುದಾದ ಕೃತಿಯಾಗಿ ಇದು ಮುಖ್ಯವಾಗುತ್ತದೆ. 1858-1914ರ ನಡುವೆ ವಸಾಹತುಶಾಹಿ ಆಡಳಿತದಲ್ಲಿ ಭಾರತದ ಆರ್ಥಿಕತೆ ತನ್ನ ಸಾಂಪ್ರದಾಯಿಕ ನೆಲೆಗಟ್ಟನ್ನು ಕಳೆದುಕೊಂಡು, ಹೇಗೆ ಶೋಷಣೆಯುಕ್ತ ವ್ಯವಸ್ಥೆಯೊಳಗೆ ಸೆಳೆಯಲ್ಪಟ್ಟಿತು ಮತ್ತು ಅದು ಭಾರತದ ಸಮಾಜ ಮತ್ತು ಜನಜೀವನದ ಮೇಲೆ ಬೀರಿದ ಪರಿಣಾಮಗಳೇನು ಎನ್ನುವುದನ್ನು ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.