ಎಪಿಎಂಸಿ ಕಾಯ್ದೆ ತಿದ್ದುಪಡಿ 2020ರ ವಿಚಾರದಡಿಯಲ್ಲಿ ಎಚ್.ಎನ್ ನಾಗಮೋಹನ ದಾಸ್ ಅವರು ರಚಿಸಿದ ಕೃತಿ ‘ರೈತರ ಮೇಲೆ ಗದಾಪ್ರಹಾರ’. ನಗರಗಳಲ್ಲಿ ಸಾಲಮಾಡಿ ತಮ್ಮ ವ್ಯಾಪರದಲ್ಲಿ, ಉದ್ಯಮದಲ್ಲಿ ಮತ್ತು ಕೈಗಾರಿಕೆಯಲ್ಲಿ ನಷ್ಟ ಅನುಭವಿಸಿದವರು ಕೋರ್ಟುಗಳಲ್ಲಿ ದಿವಾಳಿ ಮೊಕದ್ದಮೆ ದಾಖಲಿಸಿ ದಿವಾಳಿ ಎಂದು ಘೋಷಿಸಿಕೊಂಡು ಸಾಲದಿಂದ ಪಾರಾಗುತ್ತಾರೆ. ನನ್ನ ದೀರ್ಘ ಕಾಲದ ನ್ಯಾಯಾಂಗ ಜೀವನದಲ್ಲಿ ರೈತರು ದಿವಾಳಿತನ ಅರ್ಜಿಯನ್ನು ಹಾಕಿದ್ದು ನಾನು ಕಾಣಲಿಲ್ಲ. ಎಪಿಎಂಸಿ ಕಾಯ್ದೆ 2020 ತಿದ್ದುಪಡಿಯಿಂದನಮ್ಮ ರೈತಾಪಿ ವರ್ಗ ಹಾಗೂ ಮಾರಕಟ್ಟೆಗಳು ಖಾಸಗಿ ವ್ಯಾಪಾರಿಗಳ ಮತ್ತು ಕಾರ್ಪೋರೇಟ್ ಸಂಸ್ಥೆಗಳ ನಿಯಂತ್ರಣಕ್ಕೆ ಒಳಗಾಗುತ್ತವೆ. ಕೃಷಿಯು ಮೂಲತಃ ಸ್ಥಳೀಯ ವ್ಯವಸ್ಥೆ. ಈ ತಿದ್ದುಪಡಿಯಿಂದ ನಮ್ಮ ಕೃಷಿಯ ಸ್ಥಳೀಯತೆಯನ್ನು ಕಳೆದುಕೊಂಡು ಬಿಡುತ್ತದೆ. ಈ ತಿದ್ದುಪಡಿಯಿಂದ ಕೃಷಿ ಉತ್ಪನ್ನವನ್ನು ಉತ್ಪಾದಿಸುವ ರೈತರ ಹಾಗೂ ಅಂತಿಮವಾಗಿ ಅದನ್ನು ಅನುಭೋಗಿಸುವ ಗ್ರಾಹಕರ ನಡುವೆ ಹೆಚ್ಚಿನ ಅಂತರ ಉಂಟಾಗುತ್ತದ. ಇದರಿಂದ ರೈತರಿಗೂ ಲಾಭವಿಲ್ಲ; ಗ್ರಾಹಕರಿಗೂ ಅನುಕೂಲವಿಲ್ಲ. ಒಟ್ಟಾರೆ ‘ಎಪಿಎಂಸಿ ಕಾಯ್ದೆ ತಿದ್ದುಪಡಿ 2020’ ರಿಂದ ಒಕ್ಕೂಟ ವ್ಯವಸ್ಥೆಗೆ ದಕ್ಕೆ; ಆಹಾರ ಭದ್ರತೆಗೆ ಹೊಡೆತ; ರೈತರ ಎಪಿಎಂಸಿಗಳು ಧ್ವಂಸ; ರೈತರು ಕೃಷಿ ಕೂಲಿಕಾರರಾಗುತ್ತಾರೆ ಎನ್ನುವ ವಿಚಾರವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೃತಿಯು ಎರಡು ಭಾಗಗಳನ್ನು ಒಳಗೊಂಡಿದ್ದು, ಒಂದನೇ ಭಾಗದಲ್ಲಿ ಕೃಷಿ ಬಿಕ್ಕಟ್ಟು ಮತ್ತು ಎಪಿಎಂಸಿ ಉಗಮ, ಎಪಿಎಂಸಿ 1966ರ ಕಾಯ್ದೆ ಕುರಿತು ನ್ಯಾಯಾಂಗ, ಎಪಿಎಂಸಿ ಕಾಯ್ದೆ ತಿದ್ದುಪಡಿ 2020 ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಠಿಗೆ ರೈತರು ವಿಚಾರಗಳನ್ನು ಒಳಗೊಂಡಿದೆ. ಎರಡನೇ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂದರ್ಶನ, ಮಧ್ಯವರ್ತಿಗಳ ವಜ್ರಮುಷ್ಟಿಯಿಂದ ಹಿಪ್ಪೆಯಾದ ರೈತರು, ಹಮಾಲರ ಮೇಲೆ ಹೊರಲಾಗದ ‘ಹೊರೆ’, ಕಂಪನಿಗಳ ಕೈಗೆಸಿಕ್ಕ ಕೃಷಿಕನ ಜುಟ್ಟು, ರೈತ ಪರ ಅಂದ್ರೆ ಯಾರ ಪರ?, ರಾಜ್ಯದಲ್ಲಿ ಬೇಕು ರೈತ ಬಜಾರ್, ಕಾಯ್ದೆ ತಿದ್ದುಪಡಿಯಿಂದ ಸರ್ಕಾರಕ್ಕೇ ಲುಕ್ಸಾನು ವಿಚಾರಗಳನ್ನು ಒಳಗೊಂಡಿದೆ.
©2024 Book Brahma Private Limited.