ಲೇಖಕ ಡಾ.ಸಿ.ಕೆ.ರೇಣುಕಾರ್ಯ ಅವರ ಲೇಖನ ಕೃತಿ ʼಅರ್ಥಶಾಸ್ತ್ರದ ಮೂಲತತ್ವಗಳುʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ಅರ್ಥಶಾಸ್ತ್ರದ ಮೂಲತತ್ವಗಳನ್ನು ಪರಿಚಯ ಮಾಡಿಕೊಡುವುದು ಈ ಗ್ರಂಥದ ಮುಖ್ಯ ಉದ್ದೇಶ. ಈ ದೃಷ್ಟಿಯಿಂದ, ಗ್ರಂಥವನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಮೊದಲನೆಯ ಭಾಗದಲ್ಲಿ ಅಂಶಲಕ್ಷಿ ಆರ್ಥಿಕ ವಿಶ್ಲೇಷಣೆಯನ್ನು ನಿರೂಪಿಸಲಾಗಿದೆ. ಎರಡನೇ ಭಾಗದಲ್ಲಿ ಸಮಗ್ರಲಕ್ಷಿ ಆರ್ಥಿಕ ವಿಶ್ಲೇಷಣೆಯನ್ನು ನಿರೂಪಿಸಲಾಗಿದೆ. ಅರ್ಥಶಾಸ್ತ್ರದ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ಗ್ರಂಥವನ್ನು ರಚಿಸಲಾಗಿದೆ. ಅಂಶಲಕ್ಷ್ಮಿ ಹಾಗೂ ಸಮಗ್ರಲಕ್ಷಿ ಆರ್ಥಿಕ ವಿಶ್ಲೇಷಣೆಗಳಿಗೆ ಗಣಿತದ ಜ್ಞಾನ ತುಂಬಾ ಆವಶ್ಯಕ. ವಾಸ್ತವವಾಗಿ ಗಣಿತೀಯ ಭಾಷೆಯಲ್ಲೇ ಇವೆರಡರ ವಿಶ್ಲೇಷಣೆ ಇಂದು ವ್ಯಾಪಕವಾಗಿ ನಡೆಯುತ್ತಿದೆ. ಈ ಗ್ರಂಥದಲ್ಲಿ ಅಷ್ಟಾಗಿ ಗಣಿತವನ್ನು ಬಳಸಿಲ್ಲ. ಸಾಧ್ಯವಾದಷ್ಟು ಸರಳವಾಗಿ, ಆರ್ಥಿಕ ತತ್ವಗಳನ್ನು ನಿರೂಪಿಸುವ ಯತ್ನವನ್ನು ನಡೆಸಲಾಗಿದೆ. ಈ ಗ್ರಂಥದಲ್ಲಿ ಚರ್ಚಿಸುವುದರಿಂದಾಚೆಗೆ ಬಹಳವಾಗಿ ಆರ್ಥಿಕ ತತ್ವಗಳಿಗೆ ಸಂಬಂಧಿಸಿದ ಸಾಹಿತ್ಯ ಬೆಳೆದಿದೆ. ಆದ್ದರಿಂದ ಈ ಗ್ರಂಥ ಅರ್ಥಶಾಸ್ತ್ರದ ಎಲ್ಲ ಮೂಲ ತತ್ವಗಳನ್ನೂ ಪರಿಚಯಿಸುವುದಿಲ್ಲ. ಅದು ಈ ಗ್ರಂಥದ ಮಿತಿಯೂ ಹೌದು. ಇದರ ತಿಳುವಳಿಕೆಯಲ್ಲಿ ಆಸಕ್ತಿ ಇರುವವರು ಆಂಗ್ಲ ಭಾಷೆಯಲ್ಲಿ ಈ ಕ್ಷೇತ್ರದಲ್ಲಿ ಪ್ರಕಟವಾಗಿರುವ ಗ್ರಂಥಗಳನ್ನೇ ಮೊರೆ ಹೋಗಬೇಕು. ಇದು ತೀರ ಅನಿವಾರ್ಯ.
©2024 Book Brahma Private Limited.