ವನವಾಸಾಂತ್ಯ

Author : ಕೆ.ಎಸ್‍. ನಾರಾಯಣಾಚಾರ್ಯ

Pages 400

₹ 400.00




Published by: ಸಾಹಿತ್ಯ ಪ್ರಕಾಶನ,
Address: ಸಾಹಿತ್ಯ ಪ್ರಕಾಶನ, ಕೊಪ್ಪಿಕರ್‍ ರಸ್ತೆ, ಹುಬ್ಬಳ್ಳಿ
Phone: 9448110031

Synopsys

ಕನ್ನಡದಲ್ಲಿ ಕೂಡ ಮಹಾಭಾರತದ ಕುರಿತು, ಕನ್ನಡ ಸಾಹಿತ್ಯ ಕ್ಷೇತ್ರದ ಹಲವು ಮಹನೀಯ ಲೇಖಕರು ಹಾಗೂ ಕವಿಗಳು ತಮ್ಮ ದೃಷ್ಟಿಕೋನದ ಕುರಿತಾಗಿನ ವಿಷಯಗಳನ್ನು ಬೇರೆ ಬೇರೆ ವಿಧಗಳಲ್ಲಿ ನಿರೂಪಿಸಿದ್ದಾರೆ. ಅಂತಹುದೇ ಇನ್ನೊಂದು ಪುಸ್ತಕ ‘ವನವಾಸಾಂತ್ಯ’. ಪುಸ್ತಕದ ಹೆಸರು ಕೂಡ ತುಂಬಾ ಆಕರ್ಷಕವಾಗಿದ್ದು, ಓದುಗರನ್ನು ತಮ್ಮತ್ತ ಸೆಳೆಯುತ್ತಿದೆ. ಡಾ. ಕೆ ಎಸ್‍ ನಾರಾಯಣಾಚಾರ್ಯ ಬರೆದಿರುವ ಈ ಪುಸ್ತಕವು ಸಾಹಿತ್ಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಮಹಾಭಾರತದ ರೋಚಕ ಕಥನಗಳು ಇಲ್ಲಿ ಪಾತ್ರಗಳ ರೂಪದಲ್ಲಿ ಜೀವ ಪಡೆದಿವೆ. ಪ್ರತಿಯೊಂದು ಪುಟಗಳಲ್ಲಿ ಕೂಡ ರೋಚಕವಾದ ಕಥಾನಕಗಳು ಓದುಗರನ್ನು ಸೆಳೆಯುತ್ತಿದೆ. ಮುಖ್ಯವಾಗಿ, ಬರೆವಣಿಗೆಯಲ್ಲಿ ಬಳಸಿರುವ ಭಾಷೆ ಸಾಮಾನ್ಯ ತಿಳಿಗನ್ನಡವಾಗಿದ್ದು, ಎಲ್ಲಾ ರೀತಿಯ ಓದುಗರಿಗೂ ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ಈ ಪುಸ್ತಕ ಮೂಡಿ ಬಂದಿದೆ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books