”ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದು ಕವಿ ಕುವೆಂಪು ಹಾಡಿದ್ದಾರೆ. ಗದುಗಿನ ಭಾರತ ಅಥವಾ ಕುಮಾರವ್ಯಾಸ ಭಾರತ ಎಂದು ಕರೆಯಲಾಗುವ ಗದುಗಿನ ವೀರನಾರಾಯಣನ ಭಕ್ತ ಕೋಳಿವಾಡದ ನಾರಾಯಣಪ್ಪ ರಚಿಸಿದ್ದು. ಮೌಖಿಕ ಪರಂಪರೆಯ ಗಮಕಿಗಳು ಹಾಗೂ ವಾಚನದ ಮೂಲಕ ಮನೆ ಮನೆ -ಮನ ತಲುಪಿದೆ ಕುಮಾರವ್ಯಾಸ ಭಾರತ. ಭಾಮಿನಿ ಷಟ್ಡದಿಯಲ್ಲಿ ಕುಮಾರವ್ಯಾಸ ಭಾರತವನ್ನು ಎಚ್.ಎಸ್. ವೆಂಕಟೇಶಮೂರ್ತಿ ಸರಳವಾಗಿ ಓದಿಸಿಕೊಂಡು ಹೋಗುವ ಕಥಾಂತರ ಮಾಡಿದ್ದಾರೆ. ಇದೊಂದು ಭಾಷಾಂತರದ ಹಾಗೆ. ಒಂದು ಕೃತಿ ಓದುಗನಿಂದ ದೂರ ಹೋಗದಂತೆ ನಡೆಸಿದ ವಿಭಿನ್ನ ಪ್ರಯತ್ನ. ಕುಮಾರವ್ಯಾಸ ಭಾರತದ ಕಥಾಂತರವನ್ನು ಮೂರು ಭಾಗಗಳಲ್ಲಿ ಎಚ್ಎಸ್ವಿ ಅವರು ಪ್ರಕಟಿಸಿದ್ದಾರೆ. ಈ ಸಂಪುಟದಲ್ಲಿ ಆದಿ ಪರ್ವ ಹಾಗೂ ಸಭಾ ಪರ್ವದ ಪದ್ಯಗಳ ಕಥಾಂತರಗಳಿವೆ. ಮೂಲ ಪಠ್ಯ ಓದಲು ಸಾಧ್ಯವಾಗದವರಿಗೆ ಹಾಗೂ ಮೂಲಪಠ್ಯಕ್ಕೆ ಹೋಗುವಂತೆ ಮಾಡುವುದಕ್ಕೆ ಇದೊಂದು ಉತ್ತಮವಾದ ಏಣಿ.
©2024 Book Brahma Private Limited.