ಸ್ವಲ್ಪದ್ರಲ್ಲಿ ಸ್ವಾರಸ್ಯ

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 126

₹ 1.00




Year of Publication: 1944
Published by: ರಂಗ ಮಂಗ ಪ್ರಕಾಶನ
Address: ಧಾರವಾಡ

Synopsys

ಶ್ರೀರಂಗರು ಬರೆದ ವಿಚಾರಪ್ರಚೋದಕ ಹರಟೆಗಳ ಸಂಕಲನ-ಸ್ವಲ್ಪದ್ರಲ್ಲಿ ಸ್ವಾರಸ್ಯ. ಯುದ್ಧದ ಸ್ವಂತ ಸುದ್ದಿಗಾರ, ಕನಕಾಚಾರ್ಯರು ಕಮ್ಯುನಿಸ್ಟರಾದರೆ?, ಕೋಳಿಯೇ ನಮ್ಮ ಕಹಳೆ, ದೋಸೆಯ ಪ್ರಾಣಹಿಂಸೆ, ಜನ್ಮಾಂತರದ ಜಂಭ ಹೀಗೆ ಹರಟೆಯ 16 ಲೇಖನಗಳಿವೆ.

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Related Books