ಯಕ್ಷಗಾನದ ಲೋಕವನ್ನು ಬಲ್ಲವರಿಗೆ ಮತ್ತೆ ಮತ್ತೆ ಮೆಲ್ಲುವ ಕಜ್ಜಾಯ, ಓದಿಗೊಂದು ಹಾಸ್ಯದ ಮೆರುಗು, ಮತ್ತೆ ಆಲೋಚಿಸಿದರೆ ಇಣಕುವ ಲೋಕ ವಿವೇಕ ವಿಚಾರಗಳ ಕೃತಿ ಲೇಖಕ ದಿನೇಶ ಉಪ್ಪೂರ ಎಮ್.ಎನ್ ಅವರ ‘ಬಲ್ಲಿರೇನಯ್ಯ’. ಕಲೆಯ ಲೋಕ, ವಿಸ್ಮಯದ ಪ್ರಪಂಚದ ಅನಾವರಣ ಇಲ್ಲಿದ್ದು, ಕಲಾವಿದರ ಚಿತ್ರಣವನ್ನು ಭಿನ್ನವಾಗಿ ಕಟ್ಟಿಕೊಡಲಾಗಿದೆ. ಕಲಾವಿದನನ್ನು ಸಾಮಾನ್ಯನಂತೆ ನಡೆಸಿಕೊಳ್ಳುವುದು ರಸಿಕರಿಗೆ ಒಪ್ಪುವ ಮಾತಲ್ಲ. ಕಲ್ಪನೆ, ಭ್ರಮೆಗಳಿಲ್ಲದಿದ್ದರೆ ಅದ್ಭುತ ರಮ್ಯವಾದ ಕಲೆಯನ್ನು ಅನುಭವಿಸಲಾಗುವುದಿಲ್ಲ. ಕಲಾವಿದನಿಗೂ ಸಹೃದಯನಿಗೂ ಸಮಾನವಾದ ಸಂಭ್ರಮ-ಸಮಸ್ಯೆ ಹಾಗೂ ವಿಸ್ಮಯದ ವಿಭಿನ್ನ ಮಗ್ಗುಲುಗಳು ಈ ಕೃತಿಯಲ್ಲಿ ತೆರೆದುಕೊಂಡಿದೆ.
©2025 Book Brahma Private Limited.