ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರು ಬರೆದ ಕೃತಿ-ಗ್ನಾನ. ಈ ಕೃತಿಯು ವಿಡಂಬನಾತ್ಮಕವಾಗಿ ಬರೆದ ಲೇಖನಗಳ ಸಂಕಲನವಾಗಿದೆ. ಈ ಪ್ರಪಂಚದ ಸೃಷ್ಟಿ ಹೇಗೆ? ಜೀವವೆಂಬುದಿದೆಯೇ?, ಜೀವ ಸೃಷ್ಟಿ ಹೇಗೆ?, ಜೀವ ಯಾರಲ್ಲಿದೆ, ಯಾರಲ್ಲಿಲ್ಲ. ಜೀವ ಎಲ್ಲಿಗೆ ಹೋಗುತ್ತದೆ. ಎಲ್ಲಿಂದ ಬಂತು, ಹೆಂಗಂ ಗ್ನಾನ, ಹೆಂಗಂ ವೃತಗಳು ಹೀಗೆ ವಿವಿಧ ಅಧ್ಯಾಯಗಳಿದ್ದು, ಹಾಸ್ಯರಸ ಹರಿಯುತ್ತದೆ. ಸ್ತ್ರೀಧರ್ಮ ರಹಸ್ಯ,, ಪತ್ರಗಳು, ಧರ್ಮ ಇತ್ಯಾದಿ ಅಧ್ಯಾಯಗಳಿವೆ. ಸ್ತ್ರೀಯು ಕೇಶ, ಕಣ್ಣು, ತುಟಿಗಳಿಂದಲೇ ಹಾವಳಿ ಮಾಡುತ್ತಿರಲು ಅವರಿಗೆ ಕೈಯಲ್ಲಿ ಲೇಖನಿಯನ್ನು ಹಿಡಿಯುವ ಅಧಿಕಾರ ಬರಲಾರದು. ಹಾಗೆ ಮಾಡಿದಲ್ಲಿ, ಬೀದಿಯಲ್ಲಿ ಹೋಗುವವರಿಗೆಲ್ಲ ಅವರು ಪ್ರಣಯ ಪತ್ರಗಳನ್ನು ಬರೆದಾರು ಇಂತಹ ವಾಕ್ಯಗಳಿಂದ ಲೇಖಕರು ಹಾಸ್ಯ ರಸ ಚಿಮ್ಮಿಸುವ ಬರೆಹಗಳನ್ನು ಈ ಸಂಕಲನದಲ್ಲಿ ಕಟ್ಟಿಕೊಡಲಾಗಿದೆ.
ಹಕ್ಕು ಲೇಖಕರವು ಎಂಬುದು ಸಾಮಾನ್ಯವಾಗಿ ಎಲ್ಲ ಸೃಜನಶೀಲ ಕೃತಿಗಳ ಮೊದಲ ಪುಟದಲ್ಲಿ ಕಾಣಿಸಿಕೊಳ್ಳುವ ವಾಕ್ಯವಾದರೆ, ಈ ಕೃತಿಯ ಮೊದಲ ಪುಟದಿಂದಲೇ ತನ್ನ ವಿಡಂಬನಾತ್ಮಕ ಹಾಸ್ಯಮಯ ಶೈಲಿಯಿಂದ ಓದುಗರ ಗಮನ ಸೆಳೆಯುತ್ತದೆ. ‘ಇದು ಸರ್ವ ಹಕ್ಕು ಕಾಯಿಸಿ ಇಡಲ್ಪಟ್ಟಿದೆ’ ಎಂಬುದೇ ಆ ವಾಕ್ಯ. ಮತ್ತೊಂದು ವಾಕ್ಯ ನೋಡಿ; ಈ ಗ್ರಂಥವನ್ನು ಮೂಸಿದವರಿಗೂ, ನೋಡಿದವರಿಗೂ ಒಂದು ಒಂದೂವರೆ ಟನ್ ತೂಕ ಪುಣ್ಯ ಸಿಗುವುದು...ಹೀಘೆ ಕಾರಂತರು ಈ ಕೃತಿಯ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಅವರ ಮುನ್ನುಡಿ ಬದಲಿಗೆ ಮರೆನುಡಿ. ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1935ರಲ್ಲಿ (ಪುಟ: 183) ಹರಟೆಗಳ ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.15-06-1934 ರಿಂದ 30-11-1934ರವರೆಗೆ ಮಂಗಳೂರಿನ ‘ಸ್ವದೇಶಾಭಿಮಾನಿ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
©2024 Book Brahma Private Limited.