`ಸಂಸ್ಕೃತಿ’ ಕೃತಿಯು ರಾಷ್ಟ್ರೋತ್ಥಾನ ಪ್ರಕಾಶನದಿಂದ ಹೊರಬಂದ ಸಂಕಲನವಾಗಿದೆ. ಈ ಕೃತಿಯು 'ಸಂಸ್ಕೃತಿ' ಎಂದರೇನು? ಸಮಾಜಜೀವನದ ವಿವಿಧಕ್ಷೇತ್ರಗಳಲ್ಲಿ ಸಂಸ್ಕೃತಿ' ಹೇಗೆ ಅಭಿವ್ಯಕ್ತಗೊಳ್ಳುತ್ತದೆ? 'ಸಂಸ್ಕೃತಿ'ಯಿಂದಾಗಿ ಮಾನವ ಜೀವನದ ವಿವಿಧ ಕ್ಷೇತ್ರಗಳು ಸಹ್ಯವೂ ಸುಂದರವೂ ಆಗುವುದಲ್ಲದೆ ಜೀವನವು ಹೇಗೆ ಉತ್ಕರ್ಷೋನ್ಮುಖವೂ ಆಗುತ್ತದೆ? - ಈ ಸಂಗತಿಗಳನ್ನು ಕುರಿತು ಕನ್ನಡದ ಶ್ರೇಷ್ಠ ವಿದ್ವಾಂಸರೂ ಸಾಹಿತಿಗಳೂ ಆದ ದೇವುಡು ನರಸಿಂಹಶಾಸ್ತ್ರೀ, ಕೆ. ಪಿ. ರಾಮನಾಥಯ್ಯ, ಬಿ. ಶಿವಮೂರ್ತಿಶಾಸ್ತ್ರೀ, ಎ. ಎನ್. ಮೂರ್ತಿರಾವ್, ಅ. ನ. ಕೃಷ್ಣರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶ್ರೀ ಶ್ರೀ ಶಿವಕುಮಾರಸ್ವಾಮಿಜೀ, ಸಿ. ಕೆ. ವೆಂಕಟರಾಮಯ್ಯ ಮೊದಲಾದವರು ಬರೆದ ಪ್ರಬಂಧಗಳ ಸಂಕಲನ – 'ಸಂಸ್ಕೃತಿ'.
©2025 Book Brahma Private Limited.