ಗ್ರಾಮೀಣ ಸಮಾಜದ ಸಮಾಜಶಾಸ್ತ್ರ

Author : ಎಂ.ಪಿ. ಶಂಕರಪ್ಪ

Pages 200

₹ 160.00




Year of Publication: 2013
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಸಮಾಜ ಶಾಸ್ತ್ರದ ಅಧ್ಯಾಪಕರಾಗಿರುವ ಡಾ.ಎಂ.ಪಿ.ಶಂಕರಪ್ಪನವರು ಈ ಕೃತಿಯನ್ನು ರಚಿಸಿದ್ದಾರೆ. ಮೊದಲಿನಿಂದಲೂ ಪ್ರಯೋಗಶೀಲ ಅಧ್ಯಯನಗಳನ್ನು ಮತ್ತು ಸಂಶೋಧನಾ ಕಾರ್ಯಗಳನ್ನು ವಿದ್ಯಾರ್ಥಿಗಳ ಜೊತೆ ಜೊತೆಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಇವರು ಸ್ವ-ಪರಿಶ್ರಮದಿಂದ ಮತ್ತು ಇತರ ಸಂಘಟನೆಗಳ ನೆರವಿನಿಂದ ಹಾಗೂ ಯುಜಿಸಿ ನೆರವಿನಿಂದ ಅನೇಕ ಅಧ್ಯಯನಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ನಡೆಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದಾರೆ. - ಪ್ರಸ್ತುತ 'ಗ್ರಾಮೀಣ ಸಮಾಜಶಾಸ್ತ್ರ ಇವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಿದ ಉಪನ್ಯಾಸದ ಅನುಭವದ ಆಧಾರದ ಮೇಲೆ ರಚಿತವಾಗಿದೆ. ಈ ಕೃತಿ ಗ್ರಾಮದ ಎಲ್ಲಾ ಕಲ್ಪನೆಗಳನ್ನು ಒಳಗೊಂಡಿದೆ. ಅಂದರೆ ಗ್ರಾಮ-ಗ್ರಾಮಗಳು, ಬಗೆಗಳು, ಗ್ರಾಮಗಳ ಪುರಾಣ ಮತ್ತು ವಾಸ್ತವ ಸಂಗತಿಗಳನ್ನು ಒಳಗೊಂಡಿದೆ. ಹಾಗೆ ಗ್ರಾಮೀಣ ಸಮಾಜದ ಆರ್ಥಿಕ ವ್ಯವಸ್ಥೆ, ಭೂ ವ್ಯವಸ್ಥೆ, ಜಾತಿ, ಕುಟುಂಬ ಮೊದಲಾದ ಅಂಶಗಳ ಬಗ್ಗೆ ಹೊಸ ಆಯಾಮವನ್ನು ತಿಳಿಸಿಕೊಡುತ್ತದೆ. ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ಪುಸ್ತಕ ಉಪಯುಕ್ತವಾಗಿದೆ.

Related Books