ರಾಮಮನೋಹರ ಲೋಹಿಯ ಅವರ ನೇರ ಸಂಪರ್ಕವಿದ್ದ ಸಮಾಜವಾದಿ ಚಳವಳಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದ ಮತ್ತು ಈಗಲೂ ಲೋಹಿಯಾ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಜೀವಂತವಾಗಿ ಇಟ್ಟುಕೊಂಡಿರುವ, ಲೌಕಿಕ ಆಸೆಗಳಿಂದ ದೂರವಿರುವ ೮ ಮಂದಿ ಹಿರಿಯರನ್ನು ಸಂದರ್ಶಿಸಿ ಈ ಸಂಪುಟವನ್ನು ಸಿದ್ದಪಡಿಸಲಾಗಿದೆ. ಇಲ್ಲಿನ ಸಂದರ್ಶನಗಳು ವಿಶಿಷ್ಟತೆಯೆಂದರೆ, ಇಲ್ಲಿ ಬರುವ ನಿರ್ದಿಷ್ಟ ವ್ಯಕ್ತಿಯ ಅಥವಾ ಪಕ್ಷದ ಕತೆಯು ಹಲವು ವ್ಯಕ್ತಿಗಳ ಹಲವು ಪಕ್ಷಗಳ ಕಥೆಯಾಗಿ ಸಂಕೀರ್ಣವಾಗಿ ಹಣೆದುಕೊಳ್ಳುವುದು. ಈ ಅರ್ಥದಲ್ಲಿ ಇದು ಭಾರತದ ರಾಜಕಾರಣ, ಚಳುವಳಿ ಹೋರಾಟಗಾರ ಪರಿಮಿತಿ ಹಾಗೂ ಸಾಧನೆಗಳನ್ನು ಸಾದರಪಡಿಸುವ ಕೃತಿಯಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಆ ಒಂದು ದೃಢ ಹೆಜ್ಜೆ ಸಾಕು ನನಗೆ , ಸಾವರ್ಕರ್ ತಲೆಗೆ ರೆಡ್‌ಕ್ಯಾಪ್ ಹಾಕಿದ್ದ , ಮಠ ಅಂದ್ರೆ ಸೋಷಲಿಸ್ಟ್ ಪಾರ್ಟಿನೆ , ಕಿಸೆರೊಕ್ಕ ರೊಟ್ಟಿ,ಭಿಕ್ಷಾ, ಒಂಟಿ ಕಂಬದ ಡೇರೆ , ಸಮಾಜವಾದಿಗಳು ವಿದೇಶಿ ಕಾರುಗಳಲ್ಲಿ ,ಪಾರ್ಲಿಮೆಂಟರಿಗಿನ ಬೆಟರ್ ಸಿಸ್ಟಂ ಇಲ್ಲ , ಗಾಂಧೀ ಸತ್ತಾಗ ಅವ್ರು ಪೇಡ ತಿಂದ್ರು , ಸಂಘರ್ಷ ಯಾಕೆ ಬೇಕು ಅಂದ್ರೆ.
©2024 Book Brahma Private Limited.