'ಮಹಾಮಹಿಮರು' ಎನ್.ಕೆ. ವೆಂಕಟರಮಣ ಅವರ ಕೃತಿಯಾಗಿದೆ. 'The Galaxy ಪುಸ್ತಕದ ಕನ್ನಡ ಅವತರಣಿಕೆಯನ್ನು 'ಮಹಾಮಹಿಮರು ಎಂಬ ಶೀರ್ಷಿಕೆಯಲ್ಲಿ ಸಾಹಿತಿಗಳಾದ ಡಾ. ಕೆ.ಆರ್. ಕಮಲೇಶರವರು ಸಂಪಾದಿಸಿದ್ದಾರೆ. ಡಾ. ಎನ್.ಕೆ. ವೆಂಕಟರಮಣರವರು ಬೆಂಗಳೂರಿನಲ್ಲಿ ಬೈನ್ಸ್ ನ್ಯೂರೋಸೈನ್ ಆಸ್ಪತ್ರೆಯ ಮುಖ್ಯಸ್ಥರು. ವೈದ್ಯಕೀಯ ಅವರಿಗೆ ವೃತ್ತಿಯಾಗಿದ್ದು, ಅದರಲ್ಲಿ ಅಸಾಧಾರಣ ಪ್ರಸಿದ್ಧಿ ಪಡೆದಿದ್ದಾರೆ. ಆಧ್ಯಾತ್ಮ ಅವರ ಪಾಲಿಗೆ ಅಷ್ಟೇ ಆಸಕ್ತಿಯ ಮತ್ತೊಂದು ಕ್ಷೇತ್ರ, ಯೋಗಿ ಶ್ರೀ ಎಂ. ಅವರ ಆಪ್ತರಲ್ಲೊಬ್ಬರಾಗಿದ್ದಾರೆ. ಲೌಕಿಕ ಮತ್ತು ಪಾರಮಾರ್ಥಿಕ ಕ್ಷೇತ್ರಗಳ ಅಪೂರ್ವ ಸಂಗಮ ಅವರಲ್ಲಿ ಮೇಳವಿಸಿದೆ. ಅವರು ತಮ್ಮ ಆಸ್ಪತ್ರೆಯ ವತಿಯಿಂದ ಪ್ರಕಟಿಸುತ್ತಿರುವ 'ಜೈವ್ ವಾಯ್ಸ್' ಮಾಸಪತ್ರಿಕೆಯ ಮೂಲಕ ನರರೋಗಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಯುಂಟುಮಾಡಲು ಶ್ರಮಿಸುತ್ತಿದ್ದಾರೆ. ತಮ್ಮ ವೃತ್ತಿಪರ ಕೆಲಸಕಾರ್ಯಗಳ ಬಿಡುವಿರದ ಚಟುವಟಿಕೆಗಳ ನಡುವೆಯೂ ಅವರು ತಮ್ಮ ಹೃದಯಕ್ಕೆ ಸಮೀಪವಾದ ಇಂಥ ಕೆಲಸಗಳಿಗೆ ಹೇಗೆ ಸಮಯವನ್ನು ಹೊಂದಿಸಿಕೊಳ್ಳುತ್ತಾರೆ ಎಂಬುದು ನಿಜಕ್ಕೂ ಅಚ್ಚರಿಯ ವಿಷಯವೇ ಆಗಿದೆ. ಎಂದು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.