ಖ್ಯಾತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ ಅವರ ಕೃತಿ-ಸಂಸ್ಕೃತ ಕವಿಗಳ ಕಾವ್ಯ ಮೀಮಾಂಸೆ. ಸಂಸ್ಕೃತ ಕವಿಗಳಾದ ವ್ಯಾಸ, ಕಾಳಿದಾಸ, ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಕವಿಗಳ ಬೃಹತ್ ಗ್ರಂಥಗಳನ್ನು ವಿಶೇಷವಾಗಿ ಕಾವ್ಯಗಳನ್ನು ಮೀಮಾಂಸೆಗೆ ಆಯ್ಕೆ ಮಾಡಿಕೊಂಡಿದ್ದು, ಲೇಖಕರ ಈ ಪ್ರಯತ್ನ ವಿನೂತನವಾಗಿದೆ. ಪ್ರಾಚೀನ ಸಂಸ್ಕೃತ ಕಾವ್ಯಗಳು ಇಡೀ ಜೀವನವನ್ನು ಪ್ರತಿನಿಧಿಸುತ್ತವೆ. ಒಂದು ವೇಳೆ ಬದುಕಿನ ಒಂದು ಭಾಗವನ್ನು ವಿಶ್ಲೇಷಿಸುತ್ತಿದ್ದರೂ ಅದು ಇಡೀ ಬದುಕಿನ ಭಾಗವೇ ಆಗಿರುತ್ತದೆ.ಈ ಕಾರಣಕ್ಕಾಗಿಯೇ ಇಂತಹ ಸಾಹಿತ್ಯವು ಉತ್ಕೃಷ್ಟವಾಗಿರುತ್ತವೆ. ಒಂದು ಕಾವ್ಯವನ್ನು ಮೀಮಾಂಸೆಗೆ ಸ್ವೀಕರಿಸುವುದು, ಅದನ್ನು ವಿಶ್ಲೇಷಿಸುವ ದೃಷ್ಟಿಕೋನ ಇತ್ಯಾದಿ ಹೇಗಿರಬೇಕು ಎಂಬುದಕ್ಕೆ ಈ ಕೃತಿಯು ಉತ್ತಮ ಮಾದರಿ ಒದಗಿಸುತ್ತದೆ.
©2024 Book Brahma Private Limited.