ಕಾವ್ಯ ಮತ್ತು ಛಂದಸ್ಸಿಗೆ ಸಂಬಂಧಿಸಿದ ಕೃತಿಯಿದು. ಸಂಸ್ಕೃತ ಅಲಂಕಾರ ಗ್ರಂಥದ ಕನ್ನಡ ಅನುವಾದ. ಅಯಕ ಪ್ರಕರಣ, ಕಾವ್ಯ ಪ್ರಕರಣ, ನಾಟಕ ಪ್ರಕರಣ, ರಸ ಪ್ರಕರಣ, ದೋಷ ಪ್ರಕರಣ, ಗುಣ ಪ್ರಕರಣ, ಶಬ್ದಾಲಂಕಾರ ಪ್ರಕರಣ, ಅರ್ಥಾಲಂಕಾರ ಪ್ರಕರಣ, ಮಿಶ್ರಾಲಂಕಾರ ಪ್ರಕರಣ ಎಂದು ವರ್ಗೀಕರಿಸಲಾಗಿದೆ.
ಈ ಕೃತಿಯ ಪ್ರಾಸ್ತಾವಿಕ ಮಾತುಗಳಲ್ಲಿ ಬಿ. ರಾಜಶೇಖರಯ್ಯ ಅವರು ಕೃತಿಯನ್ನು ಹೀಗೆ ಪರಿಚಯಿಸಿದ್ದಾರೆ-
ಪ್ರತಾಪರುದ್ರೀಯ ದೃಶ್ಯಕಾವ್ಯದ ಮಹತ್ವವನ್ನುಳ್ಳ, ಲಕ್ಷಣ-ಲಕ್ಷ್ಮಗಳನ್ನು ಸಮಗ್ರವಾಗಿ ಸಂಕ್ಷಿಪ್ತವಾಗಿ ಒಳಗೊಂಡಿರುವ ಮತ್ತು ಅಲಂಕಾರಶಾಸ್ತ್ರದ ಪ್ರಮೇಯಾಂಶಗಳೆನಿಸಿರುವ ಕಾವ್ಯ, ಕಾವ್ಯಲಕ್ಷಣ, ಕಾವ್ಯಪ್ರಯೋಜನ, ಕಾವ್ಯವೈವಿಧ್ಯ, ಗುಣ, ಅಲಂಕಾರ, ರೀತಿ, ವೃತ್ತಿ, ರಸ, ಧ್ವನಿ, ಶಬ್ದಾಲಂಕಾರ, ಅರ್ಥಾಲಂಕಾರಾದಿಗಳನ್ನು ಸಮಗ್ರವಾಗಿ - ಆದರೆ ಸಂಕ್ಷಿಪ್ತವಾಗಿ ಸರಳರೀತಿಯಲ್ಲಿ ವಾಕ್ಯಾರ್ಥಶೈಲಿಯನ್ನೂ, ಪ್ರೌಢ ಶೈಲಿಯನ ಬಿಟ್ಟು ಒಳಗೊಂಡಿರುವ ಪ್ರತಾಪರುದ್ರೀಯ ಯಶೋಭೂಷಣಮ್ ಅಥವಾ ಪ್ರತಾಪರುದ್ರೀಯಮ್ ಎಂಬ ವಿದ್ಯಾನಾಥನ ಈ ಸಂಸ್ಕೃತ ಕೃತಿಯು ಉತ್ತಮ ವಿದ್ವಾಂಸರಾದ ದಿ. ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ಅನುವಾದದೊಂದಿಗೆ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಸಂಸ್ಕೃತ ಹಾಗೂ ಕನ್ನಡವನ್ನು ಅಧ್ಯಯನಮಾಡತಕ್ಕ ವಿದ್ಯಾರ್ಥಿಗಳಿಗೆ, ವಿದ್ವಾಂಸರುಗಳಿಗೆ, ಅಲಂಕಾರಶಾಸ್ತ್ರದ ಪ್ರಾರಂಭಿಕ ಅಭ್ಯಾಸಿಗಳಿಗೆ-ಈ ಗ್ರಂಥವು ಅತ್ಯವಶ್ಯಕವಾಗಿ ಅಧೀಯ ಗ್ರಂಥವಾಗಿರುತ್ತದೆ. ಈ ಗ್ರಂಥದಲ್ಲಿನ ಪ್ರಮೇಯಾಂಶಗಳನ್ನು ಚೆನ್ನಾಗಿ ಮನನಮಾಡಿಕೊಂಡ ಬಳಿಕ ಮಮ್ಮಟ, ವಿಶ್ವನಾಥ, ಆನಂದವರ್ಧನರ ಕೃತಿಗಳು ಸುಲಭವಾಗಿ ಗ್ರಹಣಯೋಗ್ಯಗಳಾಗುತ್ತವೆಂಬುದು ಸತ್ಯ. ಅಂತೆಯೇ ಪ್ರತಾಪರುದ್ರೀಯ ಗ್ರಂಥವು ದಕ್ಷಿಣಭಾರತದಲ್ಲಿ ಅತ್ಯಾದರಣೀಯವೂ, ಅದಿಯ ಗ೦ಡವೂ ಆಗಿರುವುದರಿಂದ, ಅನೇಕ ತರಗತಿಗಳಿಗೆ ಈ ಕೃತಿಯನ್ನು ಪಾಠಗ್ರಂಥವಾಗಿ ಗೊತ್ತುಮಾಡಿರುವುದು ಇದರ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
©2024 Book Brahma Private Limited.