ನುಡಿಯೊಡಲು

Author : ಮಾಧವ ಚಿಪ್ಪಳಿ

Pages 92

₹ 100.00




Year of Publication: 2017
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕಾವ್ಯ, ಭಾಷಾಜಿಜ್ಞಾಸೆ ಮತ್ತು ತತ್ತ್ವಶಾಸ್ತ್ರ -- ಈ ಮೂರೂ ವಲಯಗಳು ಕೂಡುವ ಜಾಗದಲ್ಲಿ ನಿಂತು ಬರೆದ ಬರಹಗಳ ಸಂಕಲನ ಇದು. ಕಾವ್ಯದಿಂದ ತನ್ನ ಓದನ್ನು ಆರಂಭಿಸಿದಾಗಲೂ ಈ ಬರಹಗಳು ಸಾಹಿತ್ಯವಿಮರ್ಶೆಯ ಕಡೆಗೆ ಸಾಗುವುದಿಲ್ಲ; ಭಾಷಾದರ್ಶನ-ಕಾವ್ಯಮೀಮಾಂಸೆಯ ಕಡೆಗೆ ತಿರುಗಿದಾಗಲೂ ಇದು ಶಾಸ್ತ್ರೀಯವಾದ ವಿಶ್ಲೇಷಣೆಗೆ ಕೈಹಾಕುವುದಿಲ್ಲ; ತತ್ತ್ವಜ್ಞಾನದ ಕಡೆಗೆ ಸಾಗಿದಾಗಲೂ ಈ ಬರಹಗಳು ಅದನ್ನು ಮುಟ್ಟಿ ಮುನ್ನಡೆಯುತ್ತವೆಯೇ ಹೊರತು ಅಲ್ಲೇ ನಿಲ್ಲುವುದಿಲ್ಲ. ಹೀಗೆ, ಹಲವು ಮಾರ್ಗಗಳನ್ನು ಒಟ್ಟಿಗೇ ಇಟ್ಟುಕೊಂಡು ಹೊರಟರೂ ಅಂತಿಮವಾಗಿ ಮುಕ್ತವಿಹಾರದ ಮನಸ್ಸಲ್ಲಿ ಚಿಂತನೆಯಿಂದ ಚಿಂತನೆಗೆ ಜಿಗಿಯುತ್ತ ಸಾಗುವ ಈ ಬರಹಗಳು ಓದುಗರಿಗೂ ಅಂಥದೇ ಲಂಘನದ ಸ್ವಾತಂತ್ರ್ಯವನ್ನು ಕೊಡಬಲ್ಲ ಸಾಮರ್ಥ್ಯವನ್ನು ಪಡೆದಿವೆ.

About the Author

ಮಾಧವ ಚಿಪ್ಪಳಿ

ಲೇಖಕ, ಅನುವಾದಕ ಮಾಧವ ಚಿಪ್ಪಳಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಚಿಪ್ಪಳಿಯವರು. ಸಾಗರದ ಲಾಲ್‍ಬಹಾದೂರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ., ಜೊತೆಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾತತ್ತ್ವಶಾಸ್ತ್ರ ಮತ್ತು ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು ಬರೆದ ಭಾಷೆ-ತತ್ತ್ವ-ಕವಿತೆಗಳ ಕುರಿತ ಪ್ರಬಂಧಗಳ ಸಂಕಲನ ‘ನುಡಿಯೊಡಲು,’ ಅನುವಾದಿಸಿರುವ ‘ಆರು ಟಾಲ್‍ಸ್ಟಾಯ್ ಕತೆಗಳು’ ಮತ್ತು ಜಿಯಾವುದ್ದೀನ್ ಸರ್ದಾರರ ‘ಸ್ವರ್ಗ ಸಾಧನೆಯ ಉತ್ಕಟ ಬಯಕೆ: ಸಂದೇಹಿ ಮುಸ್ಲಿಮನ ಯಾತ್ರೆಗಳು’ ಈಗಾಗಲೇ ಪ್ರಕಟಗೊಂಡಿವೆ. ಅವರ ‘ಆರು ಟಾಲ್‍ಸ್ಟಾಯ್ ಕತೆಗಳು’ ಪುಸ್ತಕಕ್ಕೆ ...

READ MORE

Related Books