ಭಾರತೀಯ ಕಾವ್ಯಮೀಮಾಂಸೆಯಲ್ಲಿ ಆನಂದವರ್ಧನ ಕಾವ್ಯ ಮೀಮಾಂಸೆಯ ತತ್ವ ,ಕನ್ನಡ ಧ್ವನ್ಯಾಲೋಕದ ಪರಿಚಯವನ್ನು ಸ್ಥೂಲವಾಗಿ ತಿಳಿಸುವ ಕೃತಿಯಾಗಿದೆ.
ಧ್ವನಿ ಎಂದರೇನು, ಕಾವ್ಯಮೀಮಾಂಸೆಯಲ್ಲಿ ಅದರ ಸ್ಥಾನವೇನು ಮತ್ತು ಕಾವ್ಯದ ಎಲ್ಲಾ ಅಂಶಗಳಲ್ಲಿಯೂ ಕಂಡುಬರುವ ’ಧ್ವನಿ’ಯನ್ನು ಆನಂದವರ್ಧನನು ವಿವರಿಸುವುದನ್ನೂ ಈ ಕೃತಿ ತಿಳಿಸುತ್ತದೆ. ಕಾವ್ಯ ಮೀಮಾಂಸೆಯ ತತ್ವ ವಿಕಾಸ, ಕಾವ್ಯಾಲಂಕಾರ, ಧ್ವನಿ ತತ್ವದ ವಿವರಣೆ, ಧ್ವನಿ ತತ್ವದ ಮೂಲ ಪ್ರೇರಣೆ, ರಸತತ್ವ, ವಿವಿಧ ಪ್ರಬೇಧಗಳು, ಮತ್ತು ಆನಂದವರ್ಧನ ಕಾಲದ ಪ್ರಾಕೃತ ಕಾವ್ಯಕ್ಕಿದ್ದ ಮನ್ನಣೆ, ಧ್ವನಿ ಎಂಬುದನ್ನು ಲಾಕ್ಷಣಿಕರು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಆನಂದವರ್ಧನ ಈ ಕೃತಿಯಲ್ಲಿ ಪ್ರತಿಪಾದಿಸುತ್ತಾನೆ.
ಕನ್ನಡ ಧ್ವನ್ಯಾಲೋಕವನ್ನು ಪರಿಚಯಿಸುತ್ತಾ ಅವುಗಳ ಮೂಲಕಾರಿಕೆಗಳ ಮತ್ತು ಪರಿಕರ ಶ್ಲೋಕಗಳ ಆಕಾರಾದಿಯನ್ನು ಮತ್ತು ಧ್ವನ್ಯಾಲೋಕದಲ್ಲಿರುವ ಲಕ್ಷ್ಯಗಳ ಆಕಾರಾದಿಗಳನ್ನು ಈ ಕೃತಿ ತಿಳಿಸುತ್ತದೆ.
©2024 Book Brahma Private Limited.