‘ಕಾಗೆಯ ಕಾಯಕ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರಿಸಮ್ ವಿಜ್ಞಾನ ಮಾಲಿಕೆ-9ರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಹೀಗೆ ಉಲ್ಲೇಖಿಸಿದೆ; ‘ಬೆಂಗಳೂರಿನಂಥ ಪಟ್ಟಣದಲ್ಲಿ ಕುಳಿತು ಯಾವ ಪಕ್ಷಿಯ ಅಧ್ಯಯನ ಮಾಡಲು ಸಾಧ್ಯ? 'ಕಾಗೆ' ಸುಲಭವಾಗಿ ಸಿಗುವ ಹಕ್ಕಿ ಅದನ್ನೇ ತಮ್ಮ ಅಧ್ಯಯನಕ್ಕಾಗಿ ಉಪಯೋಗಿಸಿಕೊಂಡು ಬರೆದ ಕತೆ 'ಕಾಗೆಯ ಕಾಯಕ ತನ್ನ ವಿಭಿನ್ನ ವರ್ತನೆಯಿಂದ ಪಕ್ಷಿಲೋಕದಲ್ಲಿ ವಿಶಿಷ್ಟವೆನ್ನಿಸುವ ಈ ಪಕ್ಷಿಗೆ ತನ್ನದೇ ಆದ ನೀತಿ ನಿಯಮಗಳುಂಟು, ಅವುಗಳ ಆಡುಭಾಷೆ ಸಂಗೀತ, ನೃತ್ಯ, ಜಾಣ್ಮೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಲೇಖಕರು, ಇವೆಲ್ಲ ನನ್ನ ಸ್ವಾನುಭವ ಹಾಗೂ ನಾನು ಬಂದು ಹೇಳಿದ್ದಲ್ಲ' ಎನ್ನುತ್ತಾರೆ. ಕಾಕರಾಜ ನ ಚಮತ್ಕಾರಿಕ ಜೀವನ ಈ ಪ್ರಸ್ತಕ ಬಹುಶಃ ಕನ್ನಡದಲ್ಲಿಯ ಮೊಟ್ಟ ಮೊದಲ ಕೃತಿ ಇದಾಗಿದೆ’ ಎಂದು.
©2024 Book Brahma Private Limited.