ಹಿರಿಯ ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರು ಕೃತಿ-ಖಗಸಿರಿ. ಅಪಾರ ಜೀವರಾಶಿಯಲ್ಲಿ ಪಕ್ಷಿಗಳದ್ದೇ ಒಂದು ವೈಶಿಷ್ಟ್ಯ. ಅವುಗಳ ವಾಯುಗಮನದ ಪರಿಪೂರ್ಣತೆ, ಮನತಣಿಸುವ ವರ್ಣವಿನ್ಯಾಸ, ಗರಿಗೆದರುವ ವೈಖರಿ, ಗಾನಸುಧೆ, ಉಲ್ಲಾಸಭರಿತ ದಿನಚರಿ, ಆಹಾರ ದೊರಕಿಸಿಕೊಳ್ಳುವ ಸಾಧನೆ, ಗೂಡುಕಟ್ಟುವ ನಿಪುಣತೆ, ಮರಿಪಾಲನೆಯ ಹೊಣೆ, ಆಗಮನ-ನಿರ್ಗಮನ ಇವೆಲ್ಲ ವಿಸ್ಮಯಭರಿತವಾಗಿದ್ದು, ‘ಪಕ್ಷಿ ವೀಕ್ಷಣೆ’ ಇಂದು ಆಸಕ್ತಿದಾಯಕ ಹವ್ಯಾಸ. ಕರ್ನಾಟಕದಲ್ಲಿ ಕಂಡು ಬರುವ ಜಲಪಕ್ಷಿಗಳು, ನೀರ್ನಡಿಗೆಯ ಪಕ್ಷಿಗಳು, ಗಗನ ವಿಹಾರಿಗಳು ಇತ್ಯಾದಿ ಹಲವಾರು ಪಕ್ಷಿಗಳ ಪರಿಚಯವನ್ನು ಸೂಕ್ತ ವರ್ಣಚಿತ್ರಗಳ ಮೂಲಕ ಮಾಡಿದೆ. ಪಕ್ಷಿ ಜೀವನದ ಕುತೂಹಲಕಾರಿ ವಿಶೇಷತೆಗಳನ್ನು ಹಾಗೂ ಅವುಗಳು ಬದುಕಿ ಬಾಳಲ್ಲಿ ರೂಢಿಸಿಕೊಂಡ ಅನೇಕ ಸಾಧನೆಗಳನ್ನು ಪ್ರಬಂಧ, ಅನುಬಂಧಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ಕನ್ನಡದಲ್ಲಿ ಹೆಸರು ಕಾಣದ ಕೆಲವು ಪಕ್ಷಿಗಳು ಹೊಸ ಹೆಸರು ತಳೆದು ಕನ್ನಡಿಗರ ಮನದಲ್ಲಿ ಮೂಡುವಂತೆ ಮಾಡಲಾಗಿದೆ. ಈ ಸರಣಿಯಲ್ಲಿ ಚಿತ್ರ, ಗಂಧರ್ವ, ಖಗರತ್ನ, ಜಲಚತುರೆ, ಫಲಕಫಣಿ ಇವು ಕೆಲವು. ವನಪಾಲಕರಿಗೆ, ವನ್ಯಜೀವಿ ಪ್ರೇಮಿಗಳಿಗೆ, ಪಕ್ಷಿವೀಕ್ಷಕ ಹವ್ಯಾಸಿಗಳಿಗೆ, ಎಲ್ಲ ಕನ್ನಡ ಬಂಧುಗಳಿಗೂ ಇದೊಂದು ಸಚಿತ್ರ ಪಕ್ಷಿ ಕೈಪಿಡಿ. ಕನ್ನಡ ಸಾಹಿತ್ಯ ವಲಯದಲ್ಲಿ ಈ ಕೃತಿಯು ತನ್ನದೇ ಆದ ವೈಶಿಷ್ಟತೆಯಿಂದ ಬೀಗುತ್ತದೆ.
©2024 Book Brahma Private Limited.