’ಜ್ಯೋತಿಷ್ಯಶಾಸ್ತ್ರವು ಒಂದು ವಿಜ್ಞಾನ’ ಎನ್ನುವ ಲೇಖಕರು ’ಅದು ಖಗೋಳ ಮತ್ತು ಭೂಗೋಲ ಶಾಸ಼ಗಳನ್ನೋಳಗೊಂಡು ಒಂದು ಶಾಸ್ತ್ರ’ ಎಂದು ಅಭಿಪ್ರಾಯ ಪಡುತ್ತಾರೆ. ಸದ್ಯ ಪ್ರಚಲಿತವಿರುವ ಕೆಲವೊಂದು ಪದ್ಧತಿಗಳು ವಿಜ್ಞಾನದಿಂದ ಹೊರಗೆ ಹೋಗಿ ಮೌಢ್ಯತೆಗೆ ಅವಕಾಶಮಾಡಿಕೊಡುವ ಹಾಗಿವೆ. ಕೆಲ ಆಧಾ ರರಹಿತ ಮೂಹೂರ್ತಗಳು, ವಿವಾಹ ಮಿಲನದಲ್ಲಿ ಬಳಸುವ ಕರೆಯುವ ಹೆಸರಿನಿಂದ ಗುಣಗಳನ್ನು ನಿರ್ಧರಿಸುವುದು, ಹೆಸರು ಬದಲಾವಣೆಯೊಂದಿಗೆ ವಿವಾಹ ಮಿಲನದ ಗುಣಗಳನ್ನು ನಿರ್ಧರಿಸುವುದು, ವಾಸ್ತುಶಾಸ್ತ್ರದಲ್ಲಿ ಬಳಕೆಯಾಗುವ ನಿಯಮಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ ಎಂಬುದು ಲೇಖಕರ ವಿವರಣೆ. ಜ್ಯೋತಿಷ್ಯಕ್ಕೆ ಮೂಲಾಧಾರವಾದ ಜನ್ಮಲಗ್ನ ಕುಂಡಲಿಯನ್ನು ಗಣನೆಗೆ ತೆಗೆದುಕೊಳ್ಳಬೇಕೇ ಹೊರತು ವಿವಾಹ ಮೂಹೂರ್ತವನ್ನಲ್ಲ’ ಎಂಬುದು ಲೇಖಕರ ಅಭಿಮತ. ’ಆಧುನಿಕ ವಿಜ್ಞಾನದ ಸಹಾಯದೊಂದಿಗೆ ರಚಿಸಿದ ಕೃತಿ’ ಎಂದು ಲೇಖಕರು ತಿಳಿಸಿದ್ದಾರೆ.
©2024 Book Brahma Private Limited.