ಲೇಖಕರು ಕೃತಿಯ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ‘ಶ್ರೀ ಆವಂತಿಕಾ ನಗರ (ಉಜ್ಜಯಿನಿ) ವಿಕ್ರರ್ಮಾ ಮಹಾರಾಜನ ಆಸ್ಥಾನ ಪಂಡಿತ ಶ್ರೀ ವರಾಹಾಮಿಹಿರಾಚಾರ್ಯರು ಪಂಚಸಿದ್ಧಾಂತಿಕಾ ಗ್ರಂಥ ರಚಿಸಿದರು. ಸೃಷ್ಟಿ-ಸ್ಥಿತಿ ಹಾಗೂ ಸಂಹಾರ ಕ್ರಮಗಳು ಮತ್ತು ಮನುಷ್ಯರಾದಿಯಾಗಿ ಎಲ್ಲ ಜೀವರಿಗೂ ಅಹೋರಾತ್ರಿ ನಡೆಯತಕ್ಕ ಫಲಗಳನ್ನು ಹೇಳುವಂತೆಯೂ ‘ಹೋರಾ’ ಶಾಸ್ತ್ರವನ್ನು ರಚಿಸಿದರು. ಅದನ್ನೇ ಬೃಹಜ್ಜಾತಕ ಎಂದು ಕರೆಯಲಾಗುತ್ತದೆ. ಭಾವಫಲಗಳು, ಗ್ರಹದೋಷ ಬಲಗಳು, ಶುಭಾಶುಭ ಫಲಗಳು ಇತ್ಯಾದಿ ಗಣಿತದ ಮಾದರಿಯಲ್ಲಿ ಇವುಗಳನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಜ್ಞಾನದ ಅಗತ್ಯವಿದೆ. ಇದರ ಸಂಪೂರ್ಣ ಮಾಹಿತಿ ಒಳಗೊಂಡ ಹಳೆಯ ಹಾಗೂ ಉತ್ತಮ ಕೃತಿಯೊಂದರ ಕನ್ನಡಾನುವಾದ ಇದು.
©2024 Book Brahma Private Limited.