"ಜ್ಞಾನ ವಿಜ್ಞಾನ ಕೋಶ" ಈ ಕೃತಿಯು ಒಂದು ವಿಶ್ವಕೋಶ. ವಿಜ್ಞಾನ ಬಗ್ಗೆಸಮಗ್ರ ಮಾಹಿತಿಯನ್ನು ನಾಲ್ಕು ಸಂಪುಟದಲ್ಲಿ ಪಡೆಯಬಹುದು. ಪ್ರಧಾನ ಸಂಪಾದಕರು -ಎಂ. ಎ. ಸೇತುರಾವ್ ಹಾಗೂ ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್. ಭೌತ, ರಾಸಾಯನ, ಗಣಿತ, ಖಗೋಳ, ಭೂವಿಜ್ಞಾನ, ಅಂತರಿಕ್ಷ ವಿಜ್ಞಾನ, ತಂತ್ರಜ್ಞಾನ, ಕೃಷಿ, ವೈದ್ಯ ವಿಜ್ಞಾನ, ಪರಿಸರ, ವಾತಾವರಣ, ಇತ್ಯಾದಿ ಸುಮಾರು ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಸಂಬಂಧಿದಂತೆ ಸಾವಿರಕ್ಕೂ ಹೆಚ್ಚು ಲೇಖನಗಳಿವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳ ಕಿರು ಪರಿಚಯವೂ ಸರಳ ಶೈಲಿಯಲ್ಲಿ ಈ ಪುಸ್ತಕದಲ್ಲಿ ವಿವರಿಸಿದೆ. ಸಾವಿರಕ್ಕೂ ಹೆಚ್ಚು ವರ್ಣರಂಜಿತ ರೇಖಾಚಿತ್ರ ಹಾಗೂ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ಇದೆ. ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತಿಯ ಓದುಗರಿಗೆ ಕೃತಿ ತುಂಬಾ ಪ್ರಯೋಜನಕಾರಿ.
©2025 Book Brahma Private Limited.