ಭಾರತದ ಸಮಗ್ರ ಚಿತ್ರಣ ನೀಡುವ ವಿಶ್ವಕೋಶದ ಭಾಗವಾಗಿ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಮೂಡಿ ಬಂದ 7ನೇ ಸಂಪುಟ-ಜ್ಞಾನ ಗಂಗೋತ್ರಿ.
ಕಿರಿಯರ ಜ್ಞಾನ ವಿಸ್ತಾರ ಹಾಗೂ ವಿಕಾಸಕ್ಕೆ ಜ್ಞಾನ ಗಂಗೋತ್ರಿ ಬೃಹತ್ ಮಾಲೆ ಅತ್ಯಂತ ಉಪಯುಕ್ತವಾಗಿದೆ. ವೈವಿಧ್ಯಮಯ ವಿಷಯಗಳು, ವೈಜ್ಞಾನಿಕ ಪ್ರಯೋಗಗಳು, ನೈಸರ್ಗಿಕ ವಿಸ್ಮಯಗಳು, ಭೌಗೋಳಿಕ ವೈಪರಿತ್ಯಗಳು ಹೀಗೆ ಏನೆಲ್ಲ ವಸ್ತು ವೈವಿಧ್ಯತೆಯ ಸರಣಿ ಮಾಲೆಯಡಿ ಸಂಪುಟ-7ನೇ ಕೃತಿಯಾಗಿ ಗಮನ ಸೆಳೆದಿದೆ.
ಮನುಕುಲದ ಕಥೆ, ಜೀವಜಗತ್ತು, ಭೌತಜಗತ್ತು, ಯಂತ್ರಜಗತ್ತು, ಕಲೆ, ಸಾಹಿತ್ಯ ಕ್ರೀಡೆ, ಮನೋಲ್ಲಾಸ, ಹಾಗೂ ಭಾರತದ ಕಥೆ- ಹೀಗೆ ಏಳು ಬೃಹತ್ ಸಂಪುಟಗಳ ಸರಣಿಯಡಿ ಭಾರತದ ಕಥೆಯೂ ಒಂದು ಬೃಹತ್ ಗ್ರಂಥ. ಕಿರಿಯರಿಗಾಗಿ ರಚಿಸಿದ ವಿಶ್ವಕೋಶವೇ ಆಗಿದೆ.
©2024 Book Brahma Private Limited.