ಜ್ಞಾನಗಂಗೋತ್ರಿ (ಕಿರಿಯರ ವಿಶ್ವಕೋಶ-3)

Author : ನಿರಂಜನ

Pages 713

₹ 50.00




Year of Publication: 1972
Published by: ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ
Address: ಬೆಂಗಳೂರು.

Synopsys

ಜ್ಞಾನ ಗಂಗೋತ್ರಿ ಸರಣಿ ಮಾಲೆಯಡಿ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರವು ಸಾಹಿತಿ ನಿರಂಜನ ಅವರ ಪ್ರಧಾನ ಸಂಪಾದಕತ್ವದಡಿ ‘ಭೌತಜಗತ್ತು’ ಕುರಿತ ನೂರಾರು ಪ್ರಯೋಗಗಳು, ವಿಜ್ಞಾನಿಗಳು, ಸೂತ್ರಗಳು, ಅಧ್ಯಯನಗಳ ವಿಸ್ತಾರಗಳು, ನಿಜ ಜೀವನದಲ್ಲಿ ಅವುಗಳ ಉಪಯುಕ್ತತೆ ಹೀಗೆ ಭೌತಜಗತ್ತಿನ ಸಮಗ್ರ ಶಿಕ್ಷಣವನ್ನು ಪ್ರಾಥಮಿಕವಾಗಿ ಕಿರಿಯರಿಗೆ ನೀಡುವ ಪ್ರಯತ್ನ ಇಲ್ಲಿದೆ.

ಜ್ನಾನಗಂಗೋತ್ರಿಯ 3ನೇ ಸಂಪುಟವಿದು. ಇಲ್ಲಿ 400 ಲೇಖನಗಳಿವೆ. ಆಕಾಶ, ವಾತಾವರಣ, ಭೂಮಿ, ಸಾಗರ, ವಸ್ತು-ಚೈತನ್ಯ, ಅಣು-ಪರಮಾಣು, ರಾಸಾಯನಿಕ ಕ್ರಿಯೆಗಳೂ, ಗಣಿತ -ಹೀಗೆ ಎಲ್ಲವುಗಳ ಕಿರು ಪರಿಚಯದ ಪುಸ್ತಿಕೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books