‘ಅಟ್ಟಳೆನಾಡಿನ ಅಣಿ ಮುತ್ತುಗಳು’ ಕೃತಿಯು 13 ಪ್ರಬಂಧಗಳ ಸಂಕಲನ. ಇಲ್ಲಿನ ಪ್ರಬಂಧಗಳು ಬೀದರ್ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಲೋಕಜೀವನದ ಮೇಲೆ ಬೆಳಕು ಚೆಲ್ಲುತ್ತವೆ.
ಶಿವಯೋಗೀಶ್ವರ ಸ್ವಾಮೀಜಿ, ಡಾ. ಬಸವಲಿಂಗ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ನಾಡಿನ ಆಧ್ಯಾತ್ಮಿಕ ಚೇತನಗಳು. ಪ್ರಭುರಾವ ಕಂಬಳಿವಾಲೆ ಕರ್ನಾಟಕ ಏಕೀಕರಣದ ಮುಂಚೂಣಿಯಲ್ಲಿ ಇದ್ದವರು. ಭೀಮಣ್ಣ ಖಂಡ್ರೆ ಮುತ್ಸದ್ಧಿ ರಾಜಕಾರಣಿ. ಇನ್ನು ಡಾ. ಪ್ರೇಮಾ ಸಿರ್ಸೆ, ಡಾ. ವ್ಹಿ.ಜಿ. ಭಂಡೆ, ಎಂ.ಜಿ. ದೇಶಪಾಂಡೆ, ಡಾ. ಗವಿಸಿದ್ಧಪ್ಪ ಪಾಟೀಲ, ಪಂಡಿತ ಬಸವರಾಜ, ಕಾಶೀನಾಥ ರೆಡ್ಡಿ, ವೀರಶೆಟ್ಟಿ ಬಾವುಗೆ ಉತ್ತಮ ಸಾಹಿತಿಗಳು.
ಹೀಗೆ ಬೀದರ್ ಜಿಲ್ಲೆಯ ಮಹನೀಯರ ಬಗ್ಗೆ ಅರಿಯಲು ಬಯಸುವವರಿಗೆ ಇದೊಂದು ಸಂಗ್ರಹಯೋಗ್ಯ ಕೃತಿ.
©2024 Book Brahma Private Limited.