ಲೇಖಕ ಡಾ. ಕರಿವೀರಪ್ರಭು ಕ್ಯಾಲಕೊಂಡ ಅವರ ಲೇಖನ ಕೃತಿ ʻಸೊಳ್ಳೆಗಳು ಹರಡುವ ರೋಗಗಳುʼ. “ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು. ಅದರ ಕಾಟದಿಂದ ತಪ್ಪಿಸಿಕೊಂಡು ಆರೋಗ್ಯವಾಗಿರಲು ಏನೆಲ್ಲ ಮಾರ್ಗೋಪಾಯಗಳನ್ನು ಕಂಡುಕೊಂಡರೂ, ಸೊಳ್ಳೆ ಮುಕ್ತ ಪರಿಸರದ ನಿರ್ಮಾಣದಲ್ಲಿ ಅವನು ಸೋತಿದ್ದಾನೆಂದೇ ಹೇಳಬಹುದು. ಮಲೇರಿಯಾ, ಫೈಲೇರಿಯಾ, ಡೆಂಗುಜ್ವರ, ಮಿದುಳುಜ್ವರ, ಹಳದಿಜ್ವರ ಇತ್ಯಾದಿ ಕಾಯಿಲೆಗಳು 'ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ' ಅನ್ನುವಂತೆ ಬಿಡದೆ ಕಾಡುತ್ತಿವೆ. ಇದಕ್ಕೆ ಕಾರಣ ಸೊಳ್ಳೆಗಳೇ ಆದರೂ ಅವುಗಳ ಪ್ರಮುಖ ವಾಸಸ್ಥಾನವಾದ ಕೊಳಚೆ ಪ್ರದೇಶಗಳ ನಿರ್ಮೂಲನದಲ್ಲಿ ಮಾನವ ಹಿಂದೆ ಬಿದ್ದಿದ್ದಾನೆ. ಹಾಗಾಗಿ ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ. ರೋಗಗಳೂ ಹೆಚ್ಚುತ್ತಿವೆ. ಸೊಳ್ಳೆಗಳಿಂದ ಹರಡುವ ರೋಗಗಳಾವುವು ? ಅವುಗಳಿಗೆ ಚಿಕಿತ್ಸಾ ಪರಿಹಾರವೇನು ? ಅವುಗಳ ನಿಯಂತ್ರಣಕ್ಕೆ ಅನುಸರಿಸಬಹುದಾದ ಮಾರ್ಗೋಪಾಯಗಳಾವುವು ? ಇತ್ಯಾದಿಗಳ ಬಗ್ಗೆ, ಮಕ್ಕಳ ರೋಗ ತಜ್ಞರು ಹಾಗೂ ಶಸ್ತ್ರಚಿಕಿತ್ಸಕರಾಗಿರುವ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು ಇಲ್ಲಿ ಚರ್ಚಿಸಿದ್ದಾರೆ.”
©2024 Book Brahma Private Limited.