ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ.
ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ನಾನೇ, ಕಡಲಧ್ಯಾನ (ಕವನ ಸಂಕಲನದ ಕುರಿತ ಬರಹಗಳು). ಬನ್ನಾಡಿ ಅವರಿಗೆ ಅಕ್ಷರ ಪ್ರಕಾಶನದ ಬಿ. ಎಂ. ಕಾವ್ಯ ಪ್ರಶಸ್ತಿ, ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.