ರೇಖಾಚಿತ್ರ ಕಲಾವಿದ ಹಾಗೂ ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ.
ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ ಇತ್ತೀಚೆಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ಇರುತ್ತಿತ್ತು.