ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.
ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು. ಸಂಪಾದಿತ ಕೃತಿಗಳು-ಕಲ್ಯಾಣ ಕೀರ್ತಿಯ ಚಿನ್ಮಯ, ಚಿಂತಾಮಣಿ, ಭರತೇಶ ವೈಭವದ ಶೋಭನ ಸಂಗಳು. ಜೀವನ ಚರಿತ್ರೆ-ಪ್ರಿಯದರ್ಶಿ, ಭಾರತದ ಬೆಳಕು, ಖಾರವೇಲ, ಭಗವಾನ್ ಮಹಾವೀರ, ಬುದ್ಧನ ಕಥೆ, ಮಹಮದ್ ಪೈಗಂಬರ್, ಶ್ರೀ ಶಾಂತಿಸಾಗರರು, ತೀರ್ಥಂಕರ ಮಹಾವೀರ, ಮಹಾಪುರುಷ ಸೇರಿ ಸುಮಾರು 30ಕ್ಕೂ ಹೆಚ್ಚು ಕೃತಿ ಪ್ರಕಟಿತ.
ನಿಸರ್ಗ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ದೇವರಾಜ ಬಹದ್ದೂರ್ ಪ್ರಶಸ್ತಿ, ರಾಜ್ಯ ಸರಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿವೆ. ಹಿತೈಷಿಗಳು ‘ಮಿರ್ಜಿ ಅಣ್ಣಾರಾಯ.’ ಎಂಬ ಗೌರವ ಗ್ರಂಥವನ್ನು ಅರ್ಪಿಸಿದ್ದಾರೆ.