ಬಿತ್ತು ನಿನ್ನ ಮ್ಯಾಲ ನನ್ನ ನೆದರ ಹಾರೆ ಹೋಯ್ತು ನನ್ನ ಖಬರ ಏನು ಹೇಳು ನಿನ್ನ ಹೆಸರ ಕೇಳೆ ನೀನೇ ನನ್ನ ಉಸಿರ
ಮಿಂಚಿನಂತೆ ಹೊಳೆವ ಕಣ್ಣ ಬಳ್ಳಿಯಂತೆ ಬಳುಕುವ ನಡು ಸಣ್ಣ ಸಿಹಿಜೇನಿನಂತೆ ತುಟಿಗಳ ಬಣ್ಣ ಅದ ನೋಡಿ ನನ್ನೊಳಗಿಲ್ಲ ನಾನ
ಕೆನ್ನೆ ತುಂಬ ಸೇಬು ಹಣ್ಣ ಕಡುಗಪ್ಪು ಕೇಶರಾಶಿ ಬಣ್ಣ ನಿನ್ನ ನಡಿಗೆ ಎಂತ ಚೆನ್ನ ಕಣ್ಣ ಕಾಡಿಗೆ ಕರಿಯಿತೆನ್ನ
ಇನ್ನೂ ನಾನು ನೀನು ಜೋಡ ಹೂಂ ಅಂತ ಅಣಿಮಾಡ ಕಟ್ಟೋಣ ನಮ್ಮದೇ ಗೂಡ ಹಾಡೋಣ ಪ್ರೀತಿ ಹಾಡ
ಗಾಯತ್ರಿ ಹುಳ್ಳಿ
ಕವಯತ್ರಿ ಗಾಯತ್ರಿ ಕೆಂಚಪ್ಪ ಹುಳ್ಳಿ. ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬೆಟಗೇರಿ ಅಂಚೆಯ ಮೋರನಹಳ್ಳಿಯವರು. ಬಿ.ಎಸ್.ಸಿ. ಪದವೀಧರರು. ಜೀವ ತೇವದ ಭಾವಲೋಕ-ಇವರ ಕವನ ಸಂಕಲನ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಕ್ಷ್ಮಣ ವಿ.ಎ - ಸಂತೆಯ ಸರಕು
Punch Line
Gandhada Beedu
©2024 Book Brahma Private Limited.