ಮಂಗಳೂರು ಗೋವಿಂದರಾಯರಿಂದ 1934ರಲ್ಲಿ ಶುರುವಾದ ಸಾಹಿತ್ಯ ಭಂಡಾರ, ಇಂದು ಕನ್ನಡದ ಬಹು ಮುಖ್ಯ ಪ್ರಕಾಶನ ಸಂಸ್ಥೆಯಾಗಿ ಬೆಳೆದಿದೆ. ಯಾವುದೇ ಒಂದು ವಿಚಾರಕ್ಕೆ ಅಂಟಿಕೊಳ್ಳದೆ, ಎಲ್ಲ ಪ್ರಕಾರದ ಮತ್ತು ಮಹತ್ವದ ಪುಸ್ತಕಗಳನ್ನು ಕನ್ನಡಕ್ಕೆ ಕೊಟ್ಟ ಸಂಸ್ಥೆ ಇದು.
ಎಸ್. ಎಲ್. ಭೈರಪ್ಪನವರೊಂದಿಗಿನ ಸಾಹಿತ್ಯ ಭಂಡಾರದ ನಂಟು ಗಾಢವಾದದ್ದು. ’ಧರ್ಮಶ್ರೀ’ ಕೃತಿಯಿಂದ ಆರಂಭಗೊಂಡು ಭೈರಪ್ಪನವರ ಎಲ್ಲಾ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಸಾಹಿತ್ಯ ಭಂಡಾರಕ್ಕೆ ಸಲ್ಲುತ್ತದೆ.
ಕಳೆದ 88 ವರ್ಷಗಳಲ್ಲಿ188ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಸಾಹಿತ್ಯ ಭಂಡಾರ, ಈ ಎಲ್ಲ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ನೋಡಿಕೊಂಡಿರುವುದು ವಿಶೇಷ. ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿ ಗೌರವಕ್ಕೂ ಸಾಹಿತ್ಯ ಭಂಡಾರ ಪಾತ್ರವಾಗಿದೆ.
©2025 Book Brahma Private Limited.