ವಿವಿದ ಬಗೆಯ ವಾಕ್ಯಗಳು

Date: 22-08-2023

Location: ಬೆಂಗಳೂರು


“ವಿಶಯವಾಕ್ಯಗಳಿಗೆ ಹತ್ತುವ ಪ್ರತ್ಯಯಗಳನ್ನು ಇಲ್ಲಿ ಗಮನಿಸಬಹುದು. ವಿಶಯವಾಕ್ಯ ಮುಕ್ಯವಾಗಿ ಒಂದು ಗಟನೆಯನ್ನು ತಿಳಿಸುತ್ತದೆ. ಮಾತನಾಡುವ ಸಮಯಕ್ಕಿಂತ ಮೊದಲು ಈ ಕೆಲಸ ನಡೆದಿದೆಯೆ, ಮಾತನಾಡುತ್ತಿರುವ ಸಮಯದಲ್ಲಿ ಕೆಲಸ ನಡೆಯುತ್ತಿದೆಯೆ ಇಲ್ಲವೆ ಮಾತನಾಡುವ ಸಮಯದ ನಂತರ ಕೆಲಸ ನಡೆಯುತ್ತದೆಯೆ ಎಂಬುದನ್ನು ವಿಶಯವಾಕ್ಯ ಸ್ಪಶ್ಟಪಡಿಸುತ್ತದೆ,” ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ವಿವಿದ ಬಗೆಯ ವಾಕ್ಯಗಳು' ವಿಚಾರದ ಕುರಿತು ಬರೆದಿದ್ದಾರೆ.

ವಾಕ್ಯಗಳನ್ನು ಸಾಮಾನ್ಯವಾಗಿ ಅವುಗಳ ಕೆಲಸದ ಆದಾರದ ಮೇಲೆ ಮುಕ್ಯವಾಗಿ ಅವುಗಳಲ್ಲಿ ಬಂದಿರುವ ಕ್ರಿಯಾಪದದ ಆದಾರದ ಮೇಲೆ ವಿಶಯವಾಕ್ಯ ಮತ್ತು ಕ್ರಿಯಾವಾಕ್ಯ ಎಂದು ಗುಂಪಿಸಲಾಗುತ್ತದೆ. ಇಲ್ಲಿ ಇವುಗಳನ್ನು ತುಸು ಪರಿಚಯ ಮಾಡಿಕೊಳ್ಳಬಹುದು.

ವಿಶಯವಾಕ್ಯ: ವಿಶಯವಾಕ್ಯಗಳು ಸಾಮಾನ್ಯವಾಗಿ ಒಂದು ವಿಶಯವನ್ನು, ಒಂದು ಗಟನೆಯನ್ನು ತಿಳಿಸುತ್ತವೆ. ಹೀಗೆ ವಿಶಯ ಇಲ್ಲವೆ ಗಟನೆಯನ್ನು ತಿಳಿಸುವುದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಇಂತಹಾ ವಾಕ್ಯಗಳಲ್ಲಿ ‘ಇರು’ ಎಂಬ ಒಂದು ಕ್ರಿಯಾಪದ ಬಳಕೆಯಾಗುತ್ತದೆ. ಹಾಗಾಗಿ ಇರು ಎಂಬ ಕ್ರಿಯಾಪದದ ಬಳಕೆ ವಿಶಯವಾಕ್ಯಗಳ ಮುಕ್ಯ ಲಕ್ಶಣ ಎಂದು ಹೇಳಬಹುದು. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.

ಉದಾ.: ಕಳೆದ ಕಾಲ:
ಅವರು ಮನೆಯಲ್ಲಿ ಇದ್ದರು
ಅವರು ಮನೆಯಲ್ಲಿ ಇದ್ದಾರೆ
ಬರುವ ಕಾಲ:
ಅವರು ಮನೆಯಲ್ಲಿ ಇರುತ್ತಾರೆ
ಅವರು ಮನೆಯಲ್ಲಿ ಇರುವರು

ಈ ಮೇಲಿನ ಮೂರೂ ವಾಕ್ಯಗಳಲ್ಲಿ ಇರು ಕ್ರಿಯಾಪದ ಬಂದಿದೆ. ಕನ್ನಡದ ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದಗಳು ಕೆಲಸ ನಡೆಯುವ ಇಲ್ಲವೆ ಕೆಲಸ ನಡೆದಿರುವ ಎಂಬ ಎರಡು ಕಾಲಗಳನ್ನು ಮಾತ್ರ ತಿಳಿಸುತ್ತವೆ. ಆದರೆ, ವಿಶಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದ ಈ ಎರಡು ಕಾಲಗಳೊಂದಿಗೆ ಕೆಲಸ ನಡೆಯುತ್ತಿರುವ ಎಂಬ ಇರುವ ಕಾಲವನ್ನೂ ಅಬಿವ್ಯಕ್ತಿಪಡಿಸುತ್ತವೆ. ಅಂದರೆ ಕನ್ನಡದಲ್ಲಿ ಸಾಮಾನ್ಯವಾಗಿ ಎಲ್ಲ ಕ್ರಿಯಾಪದಗಳು ಎರಡು ಕಾಲಗಳನ್ನು ಅಬಿವ್ಯಕ್ತಪಡಿಸಬಹುದು. ವಿಶಯ ವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದಕ್ಕೆ ಮೂರು ಕಾಲಗಳನ್ನು ಅಬಿವ್ಯಕ್ತಪಡಿಸುವ ಗುಣ ಇದೆ.

ಉದಾ. ಬರುವ ಕಾಲ:
ಕಪ್ಪು ಬಣ್ಣ ಚೆನ್ನಾಗಿ ಇರುವುದು
ಕಪ್ಪು ಬಣ್ಣ ಚೆನ್ನಾಗಿ ಇರುತ್ತದೆ
ಕಳೆದ ಕಾಲ:
ಕಪ್ಪು ಬಣ್ಣ ಚೆನ್ನಾಗಿ ಇತ್ತು
ಇರುವ ಕಾಲ:
ಕಪ್ಪು ಬಣ್ಣ ಚೆನ್ನಾಗಿ ಇದೆ

ಈ ವಿಶಯವಾಕ್ಯಗಳ ಇನ್ನೊಂದು ಮಹತ್ವದ ಗುಣ ಎಂದರೆ, ಅದರಲ್ಲಿ ಬರುವ ಕ್ರಿಯಾಪದವನ್ನು ಬಳಸದೆಯೂ ವಾಕ್ಯವನ್ನು ಕಟ್ಟಬಹುದು. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.

ಉದಾ: ಕನಸು ಸುಂದರ [ಇತ್ತು]
ಹೂ ಕೆಂಪು [ಇದೆ]
ಹಾಡು ಇಂಪು [ಇರುತ್ತದೆ]
ಮನೆ ಚಂದ [ಇರುವುದು]

ಹೀಗೆ ಕ್ರಿಯಾಪದವನ್ನು ಬಳಸದೆಯೂ ಅರ‍್ತವಿರುವ ಇಲ್ಲವೆ ವ್ಯಾಕರಣಾತ್ಮಕ ವಾಕ್ಯವನ್ನು ಮಾಡುವುದಕ್ಕೆ ಸಾದ್ಯ.

ಆದರೆ, ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದವನ್ನು ಯಾವುದೆ ಕಾರಣಕ್ಕೆ ತೆಗೆದು ವ್ಯಾಕರಣಾತ್ಮಕ ವಾಕ್ಯವೊಂದನ್ನು ಮಾಡುವುದು ಸಾದ್ಯ ಇಲ್ಲ. ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿ.

ಉದಾ.:
ವಿಶಯವಾಕ್ಯ ಕನಸು ಸುಂದರ ಇದೆ
ಕನಸು ಸುಂದರ
ಕ್ರಿಯಾವಾಕ್ಯ ಕುಸುಮ ಬಾಗಿಲನ್ನು ಮುಚ್ಚಿದಳು
*ಕುಸುಮ ಬಾಗಿಲನ್ನು

ಕ್ರಿಯಾಪದದ ಅನುಪಸ್ತಿತಿಯಲ್ಲಿಯೂ ಮೇಲಿನ ಕನಸು ಸುಂದರ ಎಂಬ ವಾಕ್ಯ ವ್ಯಾಕರಣಾತ್ಮಕವಾಗುತ್ತದೆ. ಆದರೆ, ಕುಸುಮ ಬಾಗಿಲನ್ನು ಎಂಬ ವಾಕ್ಯ ಪರಿಪೂರ‍್ಣ ಅರ‍್ತವನ್ನೂ ಕೊಡುವುದಿಲ್ಲ. ಹೆಚ್ಚಿನ ಸಂರ‍್ಬಗಳಲ್ಲಿಯೂ ಹೀಗೆ ಕ್ರಿಯಾಪದ ಇಲ್ಲದ ವಾಕ್ಯ ಅಪೂರ‍್ಣ ವಾಕ್ಯ ಇಲ್ಲವೆ ಅವ್ಯಾಕರಣಾತ್ಮಕ ಎಂದೆನಿಸುತ್ತದೆ.

ವಿಶಯವಾಕ್ಯಗಳಿಗೆ ಹತ್ತುವ ಪ್ರತ್ಯಯಗಳನ್ನು ಇಲ್ಲಿ ಗಮನಿಸಬಹುದು. ವಿಶಯವಾಕ್ಯ ಮುಕ್ಯವಾಗಿ ಒಂದು ಗಟನೆಯನ್ನು ತಿಳಿಸುತ್ತದೆ. ಮಾತನಾಡುವ ಸಮಯಕ್ಕಿಂತ ಮೊದಲು ಈ ಕೆಲಸ ನಡೆದಿದೆಯೆ, ಮಾತನಾಡುತ್ತಿರುವ ಸಮಯದಲ್ಲಿ ಕೆಲಸ ನಡೆಯುತ್ತಿದೆಯೆ ಇಲ್ಲವೆ ಮಾತನಾಡುವ ಸಮಯದ ನಂತರ ಕೆಲಸ ನಡೆಯುತ್ತದೆಯೆ ಎಂಬುದನ್ನು ವಿಶಯವಾಕ್ಯ ಸ್ಪಶ್ಟಪಡಿಸುತ್ತದೆ. ಹೀಗೆ ವಿವಿದ ಕಾಲಗಳನ್ನು ಸ್ಪಶ್ಟಪಡಿಸುವುದಕ್ಕೆ ಬೇರೆ ಬೇರೆ ಪ್ರತ್ಯಯಗಳನ್ನು ಇರು ಕ್ರಿಯಾಪದ ಪಡೆದುಕೊಳ್ಳುತ್ತದೆ.

ಕಳೆದ ಕಾಲ(ಬೂತ)ದ ಪ್ರತ್ಯಯ: -ತ್- ಇತ್ತು
ಇರುವ ಕಾಲ(ವರ‍್ತಮಾನ)ದ ಪ್ರತ್ಯಯ: -ದ್- ಇದೆ
ಬರುವ ಕಾಲ(ಬವಿಶತ್)ದ ಪ್ರತ್ಯಯ೧ : -ಉತ್- ಇರುತ್ತದೆ
ಬರುವ ಕಾಲ(ಬವಿಶತ್)ದ ಪ್ರತ್ಯಯ೨: -ವ್- ಇರುವುದು

ಈ ರೂಪ ಸಾಮಾನ್ಯವಾಗಿ ಮಾನವ ಅಲ್ಲದ ಸಂದರ‍್ಬಗಳಲ್ಲಿ ಬರುತ್ತದೆ. ಉಳಿದ ಸಂದರ‍್ಬಗಳಲ್ಲಿ ಇರುವನು, ಇರುವಳು, ಇರುವರು ಎಂಬ ಮೊದಲಾದ ಆಯಾ ಕರ‍್ತ್ರುವಿನ ಲಿಂಗ ಮತ್ತು ವಚನ ಪ್ರತ್ಯಯಗಳನ್ನು ಪಡೆದುಕೊಂಡ ರೂಪಗಳು ಬರುತ್ತವೆ.

ಕನ್ನಡ ವಿಶಯವಾಕ್ಯಗಳಲ್ಲಿ ಬರುವ ಕ್ರಿಯಾಪದಗಳಲ್ಲಿ ಮಾಡುಗ ಇರುವ ಇಲ್ಲವೆ ಮಾಡುಗ ಇಲ್ಲದ ಕ್ರಿಯಾಪದಗಳ ಬಳಕೆ ಆಗಬಹುದು. ಈ ಕ್ರಿಯಾಪದಗಳನ್ನು ಅವಲಂಬಿಸಿ ವಿಶಯ ವಾಕ್ಯಗಳಲ್ಲಿ ಮಾಡುಗ ಮತ್ತು ಆಗುಗ ಗಟಕಗಳು ಬರುತ್ತವೆ. ಸಾಮಾನ್ಯವಾಗಿ ಬೀಳು, ಹಾರು ಮೊದಲಾದ ಮಾಡುಗ ಇಲ್ಲದ ಕ್ರಿಯಾಪದಗಳು ಮಾಡುಗ ಗಟಕವನ್ನು ಬಯಸದೆ ಬಳಕೆಯಾಗಬಲ್ಲವು. ಆದರೆ, ನೂಕು, ಹೊಡೆ ಇಂತಾ ಮಾಡುಗ ಇರುವ ಕ್ರಿಯಾಪದಗಳು ಮಾಡುಗ ಗಟಕವನ್ನು ಬಯಸುತ್ತವೆ. ಪ್ರತ್ಯೇಕವಾದ ಒಂದು ಮಾಡುಗ ಗಟಕ ವಾಕ್ಯದಲ್ಲಿ ಬರದಿದ್ದರೂ ಅದು ಕ್ರಿಯಾಪದಗಳಿಗೆ ಹತ್ತುವ ಪ್ರತ್ಯಯಗಳ ಮೂಲಕ ಅಬಿವ್ಯಕ್ತಿ ಆಗುತ್ತದೆ. ಕೆಳಗಿನ ವಾಕ್ಯಗಳನ್ನು ಗಮನಿಸಿ.

ಉದಾ.:
ಮಾಡುಗವಿಲ್ಲದ ವಿಶಯವಾಕ್ಯಗಳು
ಹೂ ಉದುರಿತು
ಮಾಡುಗವಿರುವ ವಿಶಯವಾಕ್ಯಗಳು
ಹೂವನ್ನು ಕಿತ್ತಳು
ಅವಳು ಹೂವನ್ನು ಕಿತ್ತಳು

ಹೂ ಉದುರಿತು ಎಂಬ ವಾಕ್ಯದಲ್ಲಿ ಮಾಡುಗವೊಂದರ ಅವಶ್ಯಕತೆ ಇಲ್ಲ, ಹಾಗಾಗಿ ಇದರಲ್ಲಿ ಮಾಡುವ ಗಟಕ ಕಾಣುವುದಿಲ್ಲ. ಆದರೆ ಹೂವನ್ನು ಕಿತ್ತಳು ಎಂಬ ವಾಕ್ಯದಲ್ಲಿ ಬಂದಿರುವ ಮಾಡುಗವಿರುವ ಕ್ರಿಯಾಪದವನ್ನು ಅವಲಂಬಿಸಿ ಈ ವಾಕ್ಯ ಮಾಡುಗವೊಂದನ್ನು ಬಯಸುತ್ತದೆ. ಮಾಡುಗ ಗಟಕವನ್ನು ಬಳಸದೆ ವಾಕ್ಯವನ್ನು ಮಾಡಿದಾಗಲೂ ವಾಕ್ಯ ಅರ‍್ತಪೂರ‍್ಣ ಎನಿಸುತ್ತದೆ. ಕ್ರಿಯಾಪದಕ್ಕೆ ಅಂಟಿಕೊಂಡಿರುವ ಲಿಂಗ ಮತ್ತು ವಚನ ಪ್ರತ್ಯಯಗಳ ಮೂಲಕ ಮಾಡುಗದ ಬಗೆಗಿನ ಮಾಹಿತಿ ತಿಳಿಯುತ್ತದೆ. ಈ ಮೇಲಿನ ಅವಳು ಹೂವನ್ನು ಕಿತ್ತಳು ಎಂಬ ವಾಕ್ಯದಲ್ಲಿ ಮಾಡುಗ ಗಟಕವನ್ನು ಬಳಸಿದೆ. ಹೀಗೆ ಮಾಡುಗ ಮತ್ತು ಆಗುಗ ಎಂಬ ಎರಡು ಗಟಕಗಳನ್ನು ವಿಶಯವಾಕ್ಯಗಳಲ್ಲಿ ಗಮನಿಸಬಹುದು. ಹೀಗೆ ಮಾಡುಗ ಮತ್ತು ಆಗುಗ ಎಂಬ ಎರಡು ನಾಮಪದಗಳು ಒಂದು ವಾಕ್ಯದಲ್ಲಿ ಬಂದಾಗ ಆಗುಗವನ್ನು ಬೇರೆಯಾಗಿ ತಿಳಿಸುವುದಕ್ಕೆ -ಅನ್ನು ಎಂಬ ಪ್ರತ್ಯಯವನ್ನು ಬಳಸಲಾಗುತ್ತದೆ. ಈ ಕೆಳಗಿನ ವಾಕ್ಯವನ್ನು ಗಮನಿಸಿ,

ಉದಾ. ಕೆಂಪ ಮರದಿಂದ ಬೀಳಿಸಿದನು
ಕೆಂಪ ಹುಡುಗನನ್ನು ಮರದಿಂದ ಬೀಳಿಸಿದನು

ಮೇಲಿನ ವಾಕ್ಯದಲ್ಲಿ ಕೆಂಪ ಎಂಬ ಮಾಡುಗ ಮರದಿಂದ ಹುಡುಗನನ್ನು ಬೀಳಿಸಿದ್ದಾನೆ. ಮಾಡುಗ ಗಟಕ ಕೆಂಪ ಇದರಿಂದ ಆಗುಗವನ್ನು ಪ್ರತ್ಯೇಕವಾಗಿ ತೋರಿಸುವುದಕ್ಕೆ ಆಗುಗ ಗಟಕ ಹುಡುಗ ಇದಕ್ಕೆ ಆಗುಗ ಪ್ರತ್ಯಯ -ಅನ್ನು ಇದನ್ನು ಸೇರಿಸಲಾಗಿದೆ.

ಕನ್ನಡದಲ್ಲಿ ಆಗುಗ ಪ್ರತ್ಯಯವನ್ನು ಬಳಸುವುದು ಮಾನವ ಸಂದರ‍್ಬಗಳಲ್ಲಿ ಕಡ್ಡಾಯ. ಆದರೆ, ಮಾನವ ಅಲ್ಲದ ಸಂದರ‍್ಬಗಳಲ್ಲಿ ಕಡ್ಡಾಯವಲ್ಲ. ಈ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸಿ.

ಉದಾ. ಮಾನವ
ಹುಡುಗ ಹುಡುಗಿಯನ್ನು ಹೊಡೆದ
*ಹುಡುಗ ಹುಡುಗಿ ಹೊಡೆದ
ಹುಡುಗ ಚೆಂಡನ್ನು ಹೊಡೆದ
ಹುಡುಗ ಚೆಂಡು ಹೊಡೆದ

ಹುಡುಗ ಹುಡುಗಿಯನ್ನು ಹೊಡೆದ ಎಂಬ ವಾಕ್ಯದಲ್ಲಿ ಬಳಸಿರುವ ಆಗುಗ ಪ್ರತ್ಯಯವನ್ನು ತೆಗೆದ ವಾಕ್ಯ *ಹುಡುಗ ಹುಡುಗಿ ಹೊಡೆದ ಎಂಬುದು ಅವ್ಯಾಕರಣಾತ್ಮಕವಾಗಿ ನಿಲ್ಲುತ್ತದೆ. ಆದರೆ, ಆನಂತರದ ವಾಕ್ಯ ಹುಡುಗ ಚೆಂಡನ್ನು ಹೊಡೆದ ಇದರಲ್ಲಿ ಬಳಸಿರುವ ಆಗುಗ ಪ್ರತ್ಯಯವನ್ನು ತೆಗೆದು ಬಳಸಿದಾಗಲೂ ವಾಕ್ಯ ಹುಡುಗ ಚೆಂಡು ಹೊಡೆದ ಎಂಬುದು ವ್ಯಾಕರಣಾತ್ಮಕ ಎನಿಸುತ್ತದೆ.

ಇನ್ನು ಕ್ರಿಯಾವಾಕ್ಯವನ್ನು ತುಸು ಪರಿಚಯ ಮಾಡಿಕೊಳ್ಳಬಹುದು.

ಕ್ರಿಯಾವಾಕ್ಯ: ಕೆಲಸವನ್ನು ತಿಳಿಸುವಂತವುಗಳನ್ನು ಕ್ರಿಯಾವಾಕ್ಯಗಳು ಎಂದು ಕರೆಯಲಾಗುತ್ತದೆ. ವಿಶಯವನ್ನು ತಿಳಿಸುವ ಈ ಹಿಂದೆ ನೋಡಿರುವ ವಾಕ್ಯಗಳಿಗೆ ಎದುರಾಗಿ ಈ ವಾಕ್ಯಗಳು ಸಾಮಾನ್ಯವಾಗಿ ಒಂದು ಕೆಲಸವನ್ನು ಹೇಳುತ್ತಿರುತ್ತವೆ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.

ಉದಾ.: ಅವಳು ಊರಿಗೆ ಹೋದಳು
ಕರಿಯಪ್ಪ ಹುಡುಗಿಯನ್ನು ಕರೆದನು

ಈ ಮೇಲಿನ ವಾಕ್ಯಗಳಲ್ಲಿ ಹೋದಳು ಮತ್ತು ಕರೆದನು ಎಂಬ ಕ್ರಿಯಾಪದಗಳು ಬಂದಿವೆ. ಇಂತಾ ವಾಕ್ಯಗಳಲ್ಲಿ ಕ್ರಿಯಾಪದಗಳು ಅತ್ಯಂತ ಮುಕ್ಯವಾದವು. ಇಡಿಯ ವಾಕ್ಯ ಕ್ರಿಯಾಪದ ಕೇಂದ್ರಿತವಾಗಿದ್ದು ಒಂದು ಕ್ರಿಯೆಯನ್ನು ಸೂಚಿಸುವುದಕ್ಕೆ ಇಲ್ಲವೆ ತಿಳಿಸುವುದಕ್ಕೆ ಇವು ಬಳಕೆಯಾಗಿವೆ. ಕ್ರಿಯಾವಾಕ್ಯಗಳ ಮುಕ್ಯವಾದ ಲಕ್ಶಣ ಎಂದರೆ ಕ್ರಿಯಾಪದ. ಕ್ರಿಯಾವಾಕ್ಯಗಳಲ್ಲಿ ಕ್ರಿಯಾಪದವನ್ನು ತೆಗೆದುಹಾಕಿ ವಾಕ್ಯವನ್ನು ಮಾಡುವುದು ಸಾದ್ಯವಿಲ್ಲ. ಮೇಲಿನ ವಾಕ್ಯಗಳನ್ನು ಕೆಳಗೆ ಕ್ರಿಯಾಪದ ತೆಗೆದು ಕೊಟ್ಟಿದೆ.

ಉದಾ.: *ಅವಳು ಊರಿಗೆ
*ಕರಿಯಪ್ಪ ಹುಡುಗಿಯನ್ನು

ಈ ವಾಕ್ಯಗಳಲ್ಲಿ ಕ್ರಿಯಾಪದವನ್ನು ಬಳಸಿಲ್ಲವಾದ್ದರಿಂದ ಈ ವಾಕ್ಯಗಳು ಅವ್ಯಾಕರಣಾತ್ಮಕವಾಗಿವೆ. ಆದರೆ, ಹೀಗೆ ಕ್ರಿಯಾಪದವನ್ನು ತೆಗೆದು ವ್ಯಾಕರಣಾತ್ಮಕವಾಗಿ ವಾಕ್ಯವನ್ನು ವಿಶಯ ವಾಕ್ಯದ ಸಂದರ‍್ಬದಲ್ಲಿ ಬಳಸಲು ಸಾದ್ಯ ಎಂಬುದನ್ನು ಈ ಹಿಂದೆ ನೋಡಿದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...