Date: 08-12-2024
Location: ಬೆಂಗಳೂರು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ಈ ಸಾಮಾಜಿಕವಲ್ಲದ ಮತ್ತು ರಾಜಕೀಯ, ಯುದ್ದ, ದರ‍್ಮ ಮೊದಲಾದ ಕಾರಣಗಳಿಂದಾಗಿಯೂ ಹಲವಾರು ಬಾಶೆಗಳು ಸತ್ತಿವೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ’ ಕುರಿತು ಬರೆದಿರುವ ಲೇಖನ.
ಜಗತ್ತಿನಾದ್ಯಂತ ಸುಮಾರು ಎಂಟು-ಹತ್ತು ಸಾವಿರ ಬಾಶೆಗಳಿವೆ. ಇವುಗಳಲ್ಲಿ ಹೆಚ್ಚಿನ ಬಾಶೆಗಳು ಸಾಯುತ್ತಿವೆ. ಕಳೆದ ಸುಮಾರು ಒಂದೆರಡು ಶತಮಾನಗಳ ಕಾಲದಲ್ಲಿ ಹಲವಾರು ಬಾಶೆಗಳು ಸತ್ತುಹೋಗಿವೆ. ಬಾಶೆಗಳು ಸಾಯುತ್ತವೆ ಎಂದರೆ ಆ ಬಾಶೆಗಳನ್ನು ಆಡುವವರು ಇಡಿಯಾಗಿ ಸತ್ತುಹೋಗುತ್ತಾರೆ ಎಂದಲ್ಲ. ಅಂತಾ ನಿದರ‍್ಶನಗಳು ಕೆಲವು ಅಲ್ಲಲ್ಲಿ ಒದಗಬಹುದು. ಆದರೆ ಬಹುತೇಕ ಸಂದರ‍್ಬಗಳಲ್ಲಿ ಆ ಬಾಶೆಯನ್ನು ಆಡುವವರು ತಮ್ಮ ಬಾಶೆಗೆ ಅಂಟಿಸಲಾಗಿರುವ ಸಾಮಾಜಿಕ ಮೊದಲಾದ ಬಿನ್ನ ಕೀಳರಿಮೆಗಳನ್ನು ಎದುರಿಸಲಾಗದೆ, ಅನುಬವಿಸಲಾಗದೆ ತಮ್ಮ ಬಾಶೆಯನ್ನು ಆಡುವುದನ್ನೆ ಬಿಟ್ಟು ಸಾಮಾಜಿಕವಾಗಿ ತಮ್ಮ ಮೇಲಿರುವ ಬಾಶೆಗೆ ವರ‍್ಗವಾಗುತ್ತಿದ್ದಾರೆ. ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ಈ ಸಾಮಾಜಿಕವಲ್ಲದ ಮತ್ತು ರಾಜಕೀಯ, ಯುದ್ದ, ದರ‍್ಮ ಮೊದಲಾದ ಕಾರಣಗಳಿಂದಾಗಿಯೂ ಹಲವಾರು ಬಾಶೆಗಳು ಸತ್ತಿವೆ.
ಬಾರತದಲ್ಲಿಯೂ ಹೀಗೆ ನೂರಾರು ಬಾಶೆಗಳು ಸಾವಿನ ಅಂಚಿಗೆ ಬಂದಿವೆ. ಈ ಸಾವಿನ ಅಂಚಿನಲ್ಲಿರುವ ಬಾಶೆಗಳ ಸಂಕೆ ನಿರಂತರ ಹೆಚ್ಚಾಗುತ್ತಿದೆ. ಬಾಶೆಗಳ ಸಾವು ಎಂದರೆ ಒಂದು ಇಡಿಯಾದ ಲೋಕದ್ರುಶ್ಟಿಯ ಸಾವು ಆಗಿಬಿಡುತ್ತದೆ. ಆ ಬಾಶೆಯಲ್ಲಿ ಇರಬಹುದಾದ ಸಾಹಿತ್ಯ, ಸಂಗೀತ, ಕಲೆ ಮೊದಲಾದ ಸ್ರುಜನಾತ್ಮಕ ಅಂಶಗಳು ಮತ್ತು ಬದುಕಿನ ಬಗೆಗೆ ಇರಬಹುದಾದ ನಂಬಿಕೆ, ಲೋಕಸ್ರುಶ್ಟಿಯ ಅರಿವು ಮೊದಲಾದ ತಾತ್ವಿಕತೆಗಳು, ಬೂಮಿ, ಆಕಾಶ, ವಯಿದ್ಯ ಮೊದಲಾಗಿ ವಿವಿದ ಕ್ಶೇತ್ರಗಳಿಗೆ ಸಂಬಂದಿಸಿರಬಹುದಾದ ವಿಗ್ನಾನ ಹೀಗೆ ಎಲ್ಲವೂ ಅಳಿದುಹೋಗುತ್ತವೆ. ಮುಕ್ಯವಾಗಿ ಬಾಶೆಗಳ ಸಾವು ಮಾನವ ಸಮಾಜವನ್ನು ಬೂಮಿಯ ಮೂಲಬೂತ ಲಕ್ಶಣವಾದ ಬಹುತ್ವದಿಂದ ಆಚೆಗೆ ಕರೆದುಕೊಂಡು ಬರುತ್ತದೆ. ಇದರಿಂದಾಗಿ ಮನುಶ್ಯ ಜಗತ್ತು ಏಕತಾನತೆಗೆ ಬಿದ್ದು ಅಳಿಯುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಬಾಶೆಗಳ ಸಾವು ಜೀವಸಂಕುಲಗಳ ನಾಶದಶ್ಟೆ ಪ್ರಮುಕವಾದುದಾಗಿದೆ.
ಹಾಗಾಗಿ ಸಾಯುತ್ತಿರುವ ಬಾಶೆಗಳ ಮೇಲೆ ಹೆಚ್ಚು ಹೆಚ್ಚು ಕೆಲಸಗಳನ್ನು ತೀವ್ರವಾಗಿ ಮಾಡಬೇಕಿದೆ. ಬಾಶೆಗಳನ್ನು ಉಳಿಸುವುದಕ್ಕೆ ಇರುವ ಅತ್ಯಂತ ಸಶಕ್ತವಾದ ದಾರಿಯೆಂದರೆ ಆ ಬಾಶೆಗಳ ಬಳಕೆಗೆ ಸೂಕ್ತವಾದ ವಾತಾವರಣವನ್ನು ನಿರ‍್ಮಿಸುವುದು, ಆ ಬಾಶಾಬಳಕೆಗೆ ಮತ್ತು ಆ ಬಾಶೆ ಬಳಸುವವರಿಗೆ ಅಂಟಿಸಿರುವ ಸಾಮಾಜಿಕ ಕೀಳರಿಮೆಯಿಂದ ಹೊರಬರುವಂತೆ ಮಾಡುವುದು. ಅವರ ಬಾಶೆಗಳನ್ನು ಶಿಕ್ಶಣಕ್ಕೆ ತರುವುದು ಈ ನಿಟ್ಟಿನಲ್ಲಿ ಅತ್ಯಂತ ಮುಕ್ಯವಾದ ಕೆಲಸವಾಗುತ್ತದೆ. ಈ ಮೇಲೆ ಹೇಳಿದಂತೆ ಮಕ್ಕಳಿಗೆ ತಮ್ಮ ಬಾಶೆಗಳ ಬಗೆಗೆ ಕೀಳರಿಮೆ ಸ್ವಬಾವ ಬೆಳೆಯುವುದಿಲ್ಲ. ಇದರಿಂದ ಸಾಯುತ್ತಿರುವ ಬಾಶೆಗಳನ್ನು ಉಳಿಸುವ ಪ್ರಕ್ರಿಯೆಯಲ್ಲಿ ದೊಡ್ಡದಾದ ನೆಗೆತ ಸಿಗುತ್ತದೆ.
ಮಗುವೊಂದು ತಾಯ್ಮಾತಿನಲ್ಲಿ ಶಿಕ್ಶಣವನ್ನು ಪಡೆದುಕೊಂಡಿದ್ದರೆ ಎರಡನೆಯ ಬಾಶೆಯನ್ನು ಕಲಿಯುವುದಕ್ಕೆ ಇದು ಹೆಚ್ಚು ಸರಳವಾಗುತ್ತದೆ. ಇಲ್ಲಿ ಈ ಮೇಲೆ ಮಾತನಾಡಿರುವ ಕೆಲವು ಅಂಶಗಳನ್ನು ನೆನಪಿಸಿಕೊಳ್ಳಬೇಕು. ತಾಯ್ಮಾತಿನ ಶಿಕ್ಶಣ ಮಕ್ಕಳನ್ನು ಬಿನ್ನವಾದ ವಿಚಾರ-ವಿಶಯಗಳನ್ನು ಕಲಿಯುವುದಕ್ಕೆ ಮಾನಸಿಕ ಸಿದ್ದತೆಯನ್ನು ಒದಗಿಸುತ್ತದೆ. ಹಾಗಾಗಿ ತಾಯ್ಮಾತಿನ ಶಿಕ್ಶಣದ ಹಿನ್ನೆಲೆಯ ಮಕ್ಕಳು ಆನಂತರವೂ ಕಲಿಕಾ ಸಾಮರ್‍ತ್ವನ್ನು ಉಳಿಸಿಕೊಂಡಿರುತ್ತಾರೆ. ಇದನ್ನು ಎರಡನೆಯ ಬಾಶೆಯ ಕಲಿಕೆಯಲ್ಲಿಯೂ ಗಮನಿಸಬಹುದು. ಬಾಶೆಯ ನಿಯಮಗಳು, ಅದರ ಚಳಕಗಳನ್ನು ಹಿಡಿಯಲು ಸಾದ್ಯವಾದ ಕಾರಣ ಈ ಅನುಬವವನ್ನು ಇನ್ನೊಂದು ಬಾಶೆಯನ್ನು ಕಲಿಯುವಾಗ ಬಳಸಿಕೊಳ್ಳಲು ಸಾದ್ಯವಾಗುತ್ತದೆ. ಇದು ಇನ್ನೊಂದು ಬಾಶೆಯನ್ನು ಕಲಿಯುವಲ್ಲಿ ಮಾತ್ರವಲ್ಲದೆ ಇತರೆ ಯಾವುದೆ ಬಗೆಯ ಕಲಿಕೆಯಲ್ಲಿಯೂ ಉಪಯೋಗಿಯಾಗಿ ಇರುವುದನ್ನು ಗಮನಿಸಬಹುದು.
ತಾಯ್ಮಾತಿನ ಶಿಕ್ಶಣ ಮಕ್ಕಳಿಗೆ ಸಾಮರ್‍ತ್ಯವನ್ನು ಒದಗಿಸುತ್ತದೆ ಮತ್ತು ಅದು ಇನ್ನೊಂದು ಬಾಶೆಯ ಕಲಿಕೆಗೆ ಪೂರಕವಾಗುತ್ತದೆ. ದ್ವನಿಗಳನ್ನು ಗ್ರಹಿಸುವಲ್ಲಿ, ಲಿಪಿಗಳನ್ನು ಕಲಿಯುವಲ್ಲಿ, ಪದಗಳನ್ನು ಕಲಿಯುವ ಮತ್ತು ಅವುಗಳ ಅರ‍್ತಗಳ ಪರಿಕಲ್ಪನೆಯನ್ನು ಹಿಡಿಯುವಲ್ಲಿ, ಪದ ಮತ್ತು ಅರ‍್ತಗಳ ನಡುವೆ ಸಂಬಂದವನ್ನು ಕಲ್ಪಿಸುವಲ್ಲಿ ಅಲ್ಲದೆ ವಾಕ್ಯ ಸಂಯೋಜನೆ, ವಾಕ್ಯಗಟಕಗಳು ಮೊದಲಾದವನ್ನು ಗ್ರಹಿಸುವುದರಲ್ಲಿ ಇದು ಸಹಾಯಕವಾಗುತ್ತದೆ. ಆದರೆ ಪೆರಮಾತಿನ ಶಿಕ್ಶಣದಲ್ಲಿ ಇದು ಸಾದ್ಯವಾಗುವುದಿಲ್ಲ, ಬದಲಿಗೆ ಪೆರಮಾತಿನ ಶಿಕ್ಶಣ ಕಲಿಕಾ ಸಮರ್‍ತ್ಯವನ್ನು ಕುಗ್ಗಿಸುತ್ತದೆ.
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
©2024 Book Brahma Private Limited.