Date: 21-02-2024
Location: ಬೆಂಗಳೂರು
"ತಾಯ್ಮಾತು ಎಂದರೇನು ಎನ್ನುವುದಕ್ಕೆ ವಿಶ್ವಸಂಸ್ತೆ ಹಲವು ಅಂಶಗಳನ್ನು ಹೇಳುತ್ತದೆ. ವ್ಯಕ್ತಿಯೊಬ್ಬರು ಮಗುವಾಗಿದ್ದಾಗ ಕಲಿಯುವ ಮೊದಲ ಬಾಶೆ, ವ್ಯಕ್ತಿಯೊಬ್ಬರು ಹೆಚ್ಚು ಪಳಗಿರುವ ಬಾಶೆ, ವ್ಯಕ್ತಿಯೊಬ್ಬರು ಜೀವನದುದ್ದಕ್ಕೂ ಹೆಚ್ಚು ಬಳಸುವ ಬಾಶೆ, ವ್ಯಕ್ತಿಯೊಬ್ಬರಿಗೆ ಸಮುದಾಯದ ಸದಸ್ಯತ್ವ ಇಲ್ಲವೆ ಗುರ‍್ತಿಕೆ (ಅಯ್ಡೆಂಟಿಟಿ) ತಂದು ಕೊಡುವ ಬಾಶೆ ಆ ವ್ಯಕ್ತಿಯ ತಾಯ್ಮಾತು ಆಗಿರುತ್ತದೆ. ಮೊದಲಿಗೆ ವಿಶ್ವಸಂಸ್ತೆ ಈ ದಿವಸವನ್ನೆ ಯಾಕೆ ತಾಯ್ಮಾತಿನ ದಿವಸವಾಗಿ ಆಯ್ಕೆ ಮಾಡಿಕೊಂಡಿದೆ ಎಂಬುದನ್ನು ಸೊಲ್ಪ ಮಾತಾಡೋಣ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ವಿಶ್ವ ತಾಯ್ಮಾತಿನ ದಿವಸ ಅಂಗವಾಗಿ ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ವಿಶ್ವ ತಾಯ್ಮಾತಿನ ದಿವಸ’ ಕುರಿತು ವಿಶ್ಲೇಷಿಸಿದ್ದಾರೆ.
ಬಾಶೆ, ತಾಯ್ಮಾತು ಇವುಗಳ ಮಹತ್ವವನ್ನು ಜಗತ್ತು ಅರಿತುಕೊಳ್ಳುವುದಕ್ಕೆಂದು ವಿಶ್ವಸಂಸ್ತೆ ಪ್ರತಿವರುಶ ಪೆಬ್ರುವರಿ ೨೧ರಂದು ವಿಶ್ವ ತಾಯ್ಮಾತಿನ ದಿವಸ ಎಂದು ಆಚರಣೆ ಮಾಡುತ್ತಿದೆ. ನಾವು, ಸಾಮಾನ್ಯರು, ಹಾಗೆಯೆ ಸರಕಾರ, ವಿದ್ವತ್ತು ತಾಯ್ಮಾತಿನ ಮಹತ್ವವನ್ನು ಅರಿತುಕೊಳ್ಳಬೇಕು, ಈ ಕಾರಣಕ್ಕಾಗಿ ಈ ದಿವಸವನ್ನು ಆಚರಿಸಬೇಕಿದೆ. ಮಹತ್ವವನ್ನು ಅರಿತುಕೊಳ್ಳಬೇಕಿದೆ. ಆದುನಿಕತೆ ಬೆಳೆದು ಸಾಮಾಜಿಕತೆ ವಿಪರೀತ ಸಂಕೀರ‍್ಣತೆಯನ್ನು ಪಡೆದುಕೊಂಡಿರುವ ಈ ದಿನಗಳಲ್ಲಿ ತಾಯ್ಮಾತಿನ ಮಹತ್ವ ತಿಳಿದುಕೊಳ್ಳಬೇಕಿರುವುದು ಇನ್ನೂ ಹೆಚ್ಚು ಅತ್ಯವಶ್ಯವಾಗಿದೆ.
ಮೊದಲಿಗೆ ವಿಶ್ವಸಂಸ್ತೆ ಈ ದಿವಸವನ್ನೆ ಯಾಕೆ ತಾಯ್ಮಾತಿನ ದಿವಸವಾಗಿ ಆಯ್ಕೆ ಮಾಡಿಕೊಂಡಿದೆ ಎಂಬುದನ್ನು ಸೊಲ್ಪ ಮಾತಾಡೋಣ.
ಇಂದಿನ ಬಾಂಗ್ಲಾ ದೇಶ 1947 ರಲ್ಲಿ ಬ್ರಿಟೀಶರಿಂದ ಸ್ವತಂತ್ರ ಪಡೆದ ಪಾಕಿಸ್ತಾನ ದೇಶದ ಬಾಗವಾಗಿದ್ದಿತು. ಪಾಕಿಸ್ತಾನ ಉರ‍್ದು ಬಾಶೆಯನ್ನು ಆಡಳಿತ ಬಾಶೆಯಾಗಿಸಿಕೊಂಡಿತು ಮತ್ತು ಎಲ್ಲೆಡೆ ಇದನ್ನು ಜಾರಿಗೆ ತರಲು ಯೋಜನೆ ಶುರು ಮಾಡಿತು. ಪೂರ‍್ವ ಪಾಕಿಸ್ತಾನ ಎಂಬ ಹೆಸರನಿಂದ ಕರೆಯಲಾಗುತ್ತಿದ್ದ ಇಂದಿನ ಬಾಂಗ್ಲಾ ದೇಶದಲ್ಲಿ ಬಹುತೇಕ ಬೆಂಗಾಲಿ ಬಾಶೆ ಬಳಕೆಯಲ್ಲಿ ಇದ್ದಿತು. ಅಲ್ಲಿನ ಮಂದಿ ಉರ‍್ದು ಬಾಶೆಯ ಎದುರಾಗಿ ಬೆಂಗಾಲಿ ಬಾಶೆಯನ್ನು ಅದಿಕ್ರುತ ಬಾಶೆಯಾಗಿ ಗೋಶಿಸಲು ಒತ್ತಾಯಿಸತೊಡಗಿದರು. ಈ ಒತ್ತಾಯ ಹೋರಾಟದ ಸ್ವರೂಪವನ್ನು ಪಡೆದುಕೊಂಡಿತು. ಪಾಕಿಸ್ತಾನ ಸರಕಾರ ಈ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡಿತು. ಈ ಪ್ರಯತ್ನದಲ್ಲಿ ತಮ್ಮ ಉಸಿರೆ ಆದ ತಮ್ಮ ತಾಯ್ಮಾತಿಗಾಗಿ ಹೋರಾಟ ಮಾಡುತ್ತಿದ್ದ ಬೆಂಗಾಲಿ ಮಾತುಗ ಕೆಲವು ವಿದ್ಯಾರ‍್ತಿಗಳು ಹತರಾದರು. ಇದು ಬಾಶೆಗಾಗಿ, ತಾಯ್ಮಾತಿಗಾಗಿ ಜೀವ ಕಳೆದುಕೊಂಡ ಅಪರೂಪದ ಗಟನೆಯಾಯಿತು. ಈ ಗಟನೆಯ ನಂತರ ಹೋರಾಟ ಮುಂದುವರೆದು ಪೂರ‍್ವ ಪಾಕಿಸ್ತಾನ ಪಾಕಿಸ್ತಾನದಿಂದ ಬೇರೆಯಾಗಿ ಸ್ವತಂತ್ರ ಬಾಂಗ್ಲಾ ದೇಶವಾಗಿ ಬೆಳೆಯಿತು.
ಈ ತಾಯ್ಮಾತಿಗಾಗಿ ಹೋರಾಡಿ ಸತ್ತ ಗಟನೆಯನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವಸಂಸ್ತೆ 1999 ರಲ್ಲಿ ಈ ದಿವಸವನ್ನು ವಿಶ್ವ ತಾಯ್ಮಾತಿನ ದಿವಸ ಎಂದು ಗೋಶಣೆ ಮಾಡಿತು ಮತ್ತು ಈ ದಿವಸವನ್ನು ಪ್ರತಿವರುಶ ಜಗತ್ತಿನೆಲ್ಲೆಡೆ ತಾಯ್ಮಾತಗಳ ಮಹತ್ವವನ್ನು ಅರಿತುಕೊಳ್ಳುವುದಕ್ಕೆ, ಸಾರುವುದಕ್ಕೆ ವೇದಿಕೆಯಾಗಿಸಿಕೊಂಡಿತು. ಅಂದಿನಿಂದ ಜಗತ್ತಿನಾದ್ಯಂತ ಈ ದಿವಸವನ್ನು ತಾಯ್ಮಾತುಗಳ ಮಹತ್ವ ಸಾರುವುದಕ್ಕೆ ಆಚರಣೆ ಮಾಡುತ್ತಿದೆ.
ಇವತ್ತು, ನಾವು ತಾಯ್ಮಾತಿನ ಮಹತ್ವದ ಕುರಿತು ಒಂದೆರಡು ಮಾತುಗಳನ್ನಾಡೋಣ. ಸರಕಾರ ತಾಯ್ಮಾತುಗಳಿಗಾಗಿ, ಅವುಗಳ ಉಳಿಕೆ, ಬೆಳಕೆಗಾಗಿ ಮಹತ್ವದ ಕೆಲಸವನ್ನೇನೂ ಮಾಡದಿರುವ ಕಾಲದಲ್ಲಿ ಮತ್ತು ಸರಕಾರವೆ ನಿಂತು ಇಂಗ್ಲೀಶ್ ಮಾದ್ಯಮದ ಶಾಲೆಗಳನ್ನು ಆರಂಬಿಸುತ್ತಿರುವ ಈ ಹೊತ್ತಿನಲ್ಲಿ, ದೊಡ್ಡ ಸಂಕೆಯ ಬಾರತೀಯರಿಗೆ ಪೆರಮಾತಿನ ಶಿಕ್ಶಣವನ್ನು ಕೊಡುತ್ತಿರುವ ಹೊತ್ತಿನಲ್ಲಿ ವಿಶ್ವಸಂಸ್ತೆ ಕರೆ ಕೊಡುತ್ತಿರುವ, ಒತ್ತು ಕೊಟ್ಟು ಹೇಳುತ್ತಿರುವ ಮಾತ್ರವಲ್ಲದೆ ಜಗತ್ತಿನೆಲ್ಲ ದೇಶಗಳ ಸರಕಾರಗಳ ಮೇಲೆ ಒತ್ತಡ ತರುತ್ತಿರುವ ತಾಯ್ಮಾತಿನ ಮಹತ್ವದ ಕುರಿತು ಒಂದೆರಡು ಮಾತು ಆಡೋಣ.
ತಾಯ್ಮಾತು ಎಂದರೇನು ಎನ್ನುವುದಕ್ಕೆ ವಿಶ್ವಸಂಸ್ತೆ ಹಲವು ಅಂಶಗಳನ್ನು ಹೇಳುತ್ತದೆ. ವ್ಯಕ್ತಿಯೊಬ್ಬರು ಮಗುವಾಗಿದ್ದಾಗ ಕಲಿಯುವ ಮೊದಲ ಬಾಶೆ, ವ್ಯಕ್ತಿಯೊಬ್ಬರು ಹೆಚ್ಚು ಪಳಗಿರುವ ಬಾಶೆ, ವ್ಯಕ್ತಿಯೊಬ್ಬರು ಜೀವನದುದ್ದಕ್ಕೂ ಹೆಚ್ಚು ಬಳಸುವ ಬಾಶೆ, ವ್ಯಕ್ತಿಯೊಬ್ಬರಿಗೆ ಸಮುದಾಯದ ಸದಸ್ಯತ್ವ ಇಲ್ಲವೆ ಗುರ‍್ತಿಕೆ (ಅಯ್ಡೆಂಟಿಟಿ) ತಂದು ಕೊಡುವ ಬಾಶೆ ಆ ವ್ಯಕ್ತಿಯ ತಾಯ್ಮಾತು ಆಗಿರುತ್ತದೆ. ಹೀಗೆ, ಹಲವು ಪದರುಗಳಲ್ಲಿ ಇದನ್ನು ಅರಿತುಕೊಳ್ಳಬಹುದು. ಇವು ಮಾತ್ರವಲ್ಲದೆ ತಾಯ್ಮಾತು ಜಗತ್ತಿನ ವಿವಿದೆಡೆ ಇನ್ನೂ ತೆಳುವಾದ ಹರಡಿಕೊಂಡ ಮಹತ್ವವನ್ನು ಹೊಂದಿರಲೂಬಹುದು.
ತಾಯ್ಮಾತು ಪ್ರತಿಯೊಂದು ಮಗುವಿನ ಉಸಿರಿನೊಡನೆ ಬೆರೆತುಕೊಂಡಿರುತ್ತದೆ, ಮಗುವಿನ ಮಾನಸಿಕ ಮತ್ತು ಸಾಮಾಜಿಕ ವಿಕಸನದ ಜೊತೆಜೊತೆಗೆ ಮಗುವಿನ ಬಾಶೆಯೂ ವಿಕಸನಗೊಳ್ಳುತ್ತದೆ. ಈ ಮೂರೂ ಒಟ್ಟೊಟ್ಟಿಗೆ ಬೆಳೆಯುತ್ತವೆ. ಆದ್ದರಿಂದಲೆ ವ್ಯಕ್ತಿ ಬಾಶೆ ಎನ್ನುವುದು ವ್ಯಕ್ತಿಯೊಬ್ಬರ ಮಾನಸಿಕತೆಯನ್ನೂ ಸಾಮಾಜಿಕತೆಯನ್ನೂ ಒಟ್ಟೊಟ್ಟಿಗೆ ಪ್ರತಿನಿದಿಸುತ್ತಿರುತ್ತದೆ ಮಾತ್ರವಲ್ಲದೆ ವ್ಯಕ್ತಿಯೊಬ್ಬರ ಮಾನಸಿಕ ಮತ್ತು ಸಾಮಾಜಿಕ ರಚನೆ ಇವುಗಳು ಆ ವ್ಯಕ್ತಿಯ ಬಾಶೆಯ ರಚನೆಯಂತೆಯೆ ರೂಪುಗೊಂಡಿರುತ್ತವೆ. ಆದ್ದರಿಂದಲೆ ವ್ಯಕ್ತಿಯೊಬ್ಬರ ಅತಿ ಬಾವುಕತೆ ಸಂದರ‍್ಬದಲ್ಲಿ ಮತ್ತು ಅತಿನೋವಿನ ಸಂದರ‍್ಬದಲ್ಲಿ ಮೊದಲಿಗೆ ಬರುವ ಬಾಶೆ ತಾಯ್ಮಾತು ಆಗಿರುತ್ತದೆ. ಅಲ್ಲದೆ, ವ್ಯಕ್ತಿಯೊಬ್ಬರು ತಾಯ್ಮಾತಿನಲ್ಲಿ ಪಡೆದುಕೊಂಡಿರುವಶ್ಟು ನಿಪುಣತೆಯನ್ನು ಇನ್ನೊಂದು ಬಾಶೆಯಲ್ಲಿ ಪಡೆದುಕೊಂಡಿರುವುದಿಲ್ಲ ಮತ್ತು ಹೀಗೆ ಬೇರೆ ಬಾಶೆಗಳಲ್ಲಿ ನಿಪುಣತೆಯನ್ನು ಪಡೆದುಕೊಳ್ಳುವುದಕ್ಕೆ ಆ ವ್ಯಕ್ತಿ ತಾಯ್ಮಾತಿನಲ್ಲಿ ಹೊಂಡಿರುವ ನಿಪುಣತೆ ಪೂರಕವಾಗಿರುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ತಾಯ್ಮಾತಿನಲ್ಲಿ ಆಡುವ ಮಾತು ಮನಸಿಗೆ ಮುದ ನೀಡುತ್ತದೆ. ಬೇರೆ ಬಾಶೆಗಳಲ್ಲಿ ಎಶ್ಟೆ ಪರಿಣತಿಯನ್ನು ಪಡೆದು, ಬಳಸುತ್ತಿರುವಾಗಲೂ ತಾಯ್ಮಾತಿನಲ್ಲಿ ಆಡುವ, ಕೇಳುವ ಒಂದು ಮಾತು ಹೆಚ್ಚು ಆನಂದ ಕೊಡುತ್ತಿರುತ್ತದೆ. ತಾಯ್ಮಾತಿನಲ್ಲಿ ವ್ಯಕ್ತಿಯೊಬ್ಬರಿಗೆ ಮಾತಾಡಿಸಿದಾಗ ಅದು ಆ ವ್ಯಕ್ತಿಯ ಮನಸಿನೊಂದಿಗೆ ಮಾತನಾಡಿದಂತೆ, ಬೇರೆ ಬಾಶೆಯಲ್ಲಿ ಮಾತಾಡಿಸಿದ್ದು ವ್ಯಕ್ತಿಯ ಮಿದುಳಿನೊಂದಿಗೆ ಮಾತಾಡಿದಂತೆ. ಇದಕ್ಕೆ ಕಾರಣ ಆ ವ್ಯಕ್ತಿಯ ವ್ಯಕ್ತಿತ್ವವು ಅವರ ತಾಯ್ಮಾತಿನ ಜೊತೆಗೆ ಬೆಸೆದುಕೊಂಡಿರುತ್ತದೆ.
ಆದ್ದರಿಂದಲೆ ಮಕ್ಕಳಿಗೆ ತಾಯ್ಮಾತಿನಲ್ಲಿ ಯಾವುದೆ ವಿಚಾರವನ್ನು ಕೊಟ್ಟರೆ ಬಹುಬೇಗ ಅದನ್ನು ಹಿಡಿದುಕೊಳ್ಳುತ್ತಾರೆ. ಪೆರಮಾತಿನಲ್ಲಿ ಅದೆ ವಿಚಾರವನ್ನು ಕೊಟ್ಟಾಗ ಆ ವಿಚಾರವನ್ನು ಪಡೆದುಕೊಳ್ಳುವಲ್ಲಿ ಮತ್ತು ಅದರಲ್ಲಿ ನಿಪುಣತೆಯನ್ನು ಪಡೆದುಕೊಳ್ಳುವುಲ್ಲಿ ಸೋಲುತ್ತಾರೆ ಇಲ್ಲವೆ ನಿದಾನ ಕಲಿಕೆ ಆಗುತ್ತದೆ. ತಾಯ್ಮಾತಿನಲ್ಲಿ ಒಂದು ವಿಚಾರವನ್ನು, ವಿಶಯವನ್ನು ಕೊಟ್ಟಾಗ ಮಗು ಬಾಶೆಯ ಕಡೆಗೆ ಯಾವುದೆ ಗಮನ ಕೊಡಬೇಕಾಗಿರುವುದಿಲ್ಲ. ಹೀಗಾಗಿ ಮಗುವೊಂದು ನೇರವಾಗಿ ವಿಶಯದ ಕಡೆಗೆ ಗಮನ ಕೊಡುತ್ತದೆ. ಆಗ, ವಿಶಯವನ್ನು ಬೇಗ ಹಿಡಿದುಕೊಳ್ಳಲು ಸಾದ್ಯವಾಗುತ್ತದೆ. ಬೇರೆ ಬಾಶೆಯಲ್ಲಿ ಕೊಟ್ಟಾಗ ಮಗುವಿನ ಗಮನ ಮೊದಲಿಗೆ ತನಗೆ ಅಪರಿಚಿತವಾದ ಇಲ್ಲವೆ ತನಗೆ, ತನ್ನ ಮಿದುಳು, ಮನಸಿಗೆ ಅಪ್ಯಾಯವಲ್ಲದ ಆ ಬೇರೆ ಬಾಶೆಯ ಕಡೆಗೆ ಇರುತ್ತದೆ. ಬಾಶೆಯ ಪದಗಳು, ವಾಕ್ಯ, ರಚನೆ ಇವುಗಳ ಕಡೆಗೆ ಮೊದಲ ಗಮನ ಅನಿವಾರ‍್ಯವಾಗಿ ಹೋಗುತ್ತದೆ. ಅದನ್ನು ಕಲಿತಲ್ಲದೆ ವಿಶಯವನ್ನು ಪಡೆದುಕೊಳ್ಳುವುದಕ್ಕೆ ಸಾದ್ಯವಿಲ್ಲ. ಬಾಶೆಯನ್ನು ಅವಲೋಕಿಸುವುದಕ್ಕೆ ಕೊಡುವ ಸಮಯದ ವೇಳೆಗೆ ಆ ವಿಶಯ ಹಿಂದಕ್ಕೆ ಬಿದ್ದಿರುತ್ತದೆ. ಶಿಕ್ಶಣದಲ್ಲಿ, ಶಾಲೆಯ ವಾತಾವರಣದಲ್ಲಿ ಏನಾಗುತ್ತದೆಯೆಂದರೆ ಮಕ್ಕಳು ಆ ಬಾಶೆಯನ್ನು ಅವಲೋಕಿಸುತ್ತಲೆ ಇರುತ್ತವೆ, ಆದರೆ ವಿಶಯ ಹಾಗೆಯೆ ಹಿಂದಕ್ಕೆ ಬೀಳುತ್ತಲೆ ಇರುತ್ತದೆ. ಈ ಕಾರಣದಿಂದಲೆ ಪೆರಮಾತಿನಲ್ಲಿ ಶಿಕ್ಶಣ ಕೊಡುವಾಗ ಮಕ್ಕಳು ಶಿಕ್ಶಣದಲ್ಲಿ ಹಿಂದುಳಿಯುತ್ತಾರೆ. ಅವರದೆ ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಟ್ಟಾಗ ಮಕ್ಕಳು ಅರಳು ಹುರಿದಂತೆ ಮಾತನಾಡುತ್ತಾರೆ, ವಿಶಯವನ್ನು ನೇರ ಅರಗಿಸಿಕೊಳ್ಳುತ್ತಾರೆ. ಒಟ್ಟಾರೆ ಕಲಿಕೆಯ ಗತಿ ಮತ್ತು ಪ್ರಮಾಣ ವ್ಯಾಪಕವಾಗುತ್ತದೆ. ಪ್ರಾತಮಿಕ ಹಂತದಲ್ಲಿ ಮಕ್ಕಳಿಗೆ ಅವರ ತಾಯ್ಮಾತಿನಲ್ಲಿಯೆ ಶಿಕ್ಶಣವನ್ನು ಕೊಟ್ಟು ಆನಂತರ ಬೇರೆ ಬಾಶಾ ಮಾದ್ಯಮಗಳ ಕಡೆಗೆ ಹೋಗುವುದಕ್ಕೆ ಅವಕಾಶಗಳನ್ನು ತೆರೆದಿಡಬಹುದು. ತಾಯ್ಮಾತಿನ ಹಿಡಿತವು ಇಂಗ್ಲೀಶು ಒಳಗೊಂಡು ಯಾವುದೆ ಇನ್ನೊಂದು ಬಾಶೆಯನ್ನು ಕಲಿಯುವುದಕ್ಕೂ ಪೂರಕವಾಗಿರುತ್ತದೆ.
ತಾಯ್ಮಾತಿನ ಮಹತ್ವದ ಬಗೆಗೆ ಜಗತ್ತಿನಾದ್ಯಂತ ಸಾಕಶ್ಟು ಅದ್ಯಯನಗಳು ಬಂದಿವೆ. ಒಂದಶ್ಟು ಅವುಗಳನ್ನು ಗಮನಿಸಿದರೆ ನಮಗೆ ಒಂದಶ್ಟು ಅರಿವಿಗೆ ಬರಬಹುದು.
ಪ್ರತಿವರುಶ ವಿಶ್ವಸಂಸ್ತೆ ಈ ದಿವಸದ ಆಚರಣೆಗೆ ಒಂದು ಕೇಂದ್ರವಿಶಯವನ್ನು ಇಡುತ್ತದೆ. ಈ ವರುಶದ ಕೇಂದ್ರವಿಶಯ ಪಲಮಾತಿನ ಶಿಕ್ಶಣವು ತಲೆಮಾರುಗಳ ನಡುವಿನ ಕಲಿಕೆಯ ಆದಾರ ಸ್ತಂಬ ಎಂಬುದಾಗಿದೆ. ಇದು ಮುಕ್ಯವಾಗಿ ಬಹುಬಾಶಿಕ ಪರಿಸರವಾದ ಬಾರತಕ್ಕೆ ಅತ್ಯಂತ ಸೂಕ್ತವಾದ ವಿಶಯವಾಗಿದೆ. ತಾಯ್ಮಾತಿನ ಶಿಕ್ಶಣದ ಜೊತೆಗೆ ಬಹುಬಾಶಿಕ ಶಿಕ್ಶಣ ವ್ಯವಸ್ತೆಯ ಕಡೆಗೆ ನಾವು ನಡೆಯಬೇಕಾಗಿದೆ.
ಬಸವರಾಜ ಕೋಡಗುಂಟಿ ಅವರ ‘ತಾಯ್ಮಾತಿನ ಶಿಕ್ಶಣ’ ಕೃತಿಯ ಮಾಹಿತಿಯನ್ನು ತಿಳಿಯಲು ಈ ಲಿಂಕ್ ಅನ್ನು ಬಳಸಿ.
ಈ ಅಂಕಣದ ಹಿಂದಿನ ಬರೆಹಗಳು:
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.