Date: 07-01-2025
Location: ಬೆಂಗಳೂರು
ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಚಿತ್ರವು ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ವಿಷ್ಣುಪ್ರಿಯ’ ಚಿತ್ರವು 2019ರಲ್ಲಿ ಪ್ರಾರಂಭವಾಗಿತ್ತು. ಚಿತ್ರೀಕರಣ ಪ್ರಾರಂಭವಾಗಿ ಒಂದಿಷ್ಟು ಮುಗಿಯುವಷ್ಟರಲ್ಲಿ ಕೋವಿಡ್ ಲಾಕ್‍ಡೌನ್ ಶುರುವಾಯಿತು. 2021ರಲ್ಲಿ ಈ ಚಿತ್ರದ ಟೀಸರನ್ನು ಪುನೀತಾ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಆ ನಂತರ ಚಿತ್ರ ಸಂಪೂರ್ಣವಾದರ, ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ಈಗ ಕೊನೆಗೂ ಚಿತ್ರದ ಬಿಡುಗಡೆಗೆ ಮುಹೂರ್ತ ಸಿಕ್ಕಿದೆ.
90ರ ಕಾಲಘಟ್ಟದ ದಶಕದ ಪ್ರೇಮಕಥೆಯೊಂದನ್ನು ಹೇಳುವ ಈ ಚಿತ್ರಕ್ಕೆ ಮಲಯಾಳಂನ ಜನಪ್ರಿಯ ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಮಲಯಾಳಂ, ತೆಲುಗು, ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು ರಾಷ್ಟ್ರಪ್ರಶಸ್ತಿಗೂ ಭಾಜನರಾಗಿದ್ದಾರೆ. ‘ಕಣ್ಸನ್ನೆ ಚೆಲುವೆ’ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕ ಗೋಪಿಸುಂದರ್ ಇದು ಕನ್ನಡದಲ್ಲಿ ಮೊದಲ ಚಿತ್ರ.
ಧಾರವಾಡ ಮೂಲದ ಸಿಂಧುಶ್ರೀ ಈ ಚಿತ್ರದ ಮೂಲ ಕಥೆಗಾರರು. ಆ ಕಥೆಯ ಒಂದೆಳೆ ಪಡೆದು, ಕಥೆಯನ್ನು ವಿಸ್ತರಿಸಲಾಗಿದೆ. ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಈ ಚಿತ್ರ ಹೇಳುತ್ತದೆ.
ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ.
‘ವಿಷ್ಣು ಪ್ರಿಯ’ ಚಿತ್ರದಲ್ಲಿ ಶ್ರೇಯಸ್, ಪ್ರಿಯಾ ವಾರಿಯರ್, ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ.
2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಝಲಕ್ ಬಿಡುಗಡೆಯಾಗಿದೆ....
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಮಾರ್ಚ್ 01ರಿಂದ 08ರವರೆಗೆ ಬೆಂಗಳೂರಿನಲ್ಲಿನಡೆಯಲಿದ್ದು, ಈ ಬಾರಿ 13 ಚ...
ಬೆಂಗಳೂರು: ಸೌರವ್ ಪ್ರಕಾಶನದಿಂದ ಪ್ರಕಟಗೊಂಡ ಕೆ. ಸದಾಶಿವ ಶೆಣೈ ಅವರ ʻLovely But Lonely ಅಭಿನಯ ಶಾರದೆಯ ಜೀವನಗಾಥೆʼ...
©2025 Book Brahma Private Limited.