BIFFes-2025; ಮಾರ್ಚ್ 01 ರಿಂದ 08ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Date: 08-01-2025

Location: ಬೆಂಗಳೂರು


16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಮಾರ್ಚ್ 01ರಿಂದ 08ರವರೆಗೆ ಬೆಂಗಳೂರಿನಲ್ಲಿನಡೆಯಲಿದ್ದು, ಈ ಬಾರಿ 13 ಚಿತ್ರಮಂದಿರಗಳಲ್ಲಿ 60ಕ್ಕೂ ಹೆಚ್ಚು ದೇಶಗಳ, 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. ಈ ಚಿತ್ರಗಳ 400 ಪ್ರದರ್ಶನಗಳು ನಡೆಯಲಿವೆ.

ಈ ವಿಷಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ನಾಗತಿಹಳ್ಳಿ ಚಂದ್ರಶೇಖರ್‍, ಧನಂಜಯ್‍, ನೀನಾಸಂ ಸತೀಶ್, ಭಾವನಾ, ಸಾಧು ಕೋಕಿಲ ಸೇರಿ ಹಲವರು ಭಾಗಿ‌ಯಾಗಿದ್ದಾರೆ.

ಈ ವರ್ಷದ ಚಲನಚಿತ್ರೋತ್ಸವದ ವಿಷಯವಾಗಿ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ವಿಷಯದಡಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್‍ಯ, ಮಾರ್ಚ್ 1ರಂದು ಚಿತ್ರೋತ್ಸವದ ಉದ್ಘಾಟನೆ ಮಾಡಲಿದ್ದು, ಮಾರ್ಚ್‍ 08ರಂದು ಸಮಾರೋಪ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಗಳು ಯಾರಾಗಲಿದ್ದಾರೆ ಎಂಬ ತೀರ್ಮಾನ ಇನ್ನಷ್ಟೇ ಆಗಬೇಕಿದೆ. ಈ ಚಿತ್ರೋತ್ಸವಕ್ಕೆ ಸರ್ಕಾರವರು ಒಂಬತ್ತು ಕೋಟಿ ರೂ. ಅನುದಾನ ನೀಡಲಿದೆ.

ಈ ಸಂದರ್ಭದಲ್ಲಿ ಚಿತ್ರರಂಗದ ಕುರಿತಾಗಿ ಹಲವು ವಿಷಯಗಳನ್ನು ಮಾತನಾಡಿರುವ ಮುಖ್ಯಮಂತ್ರಿಗಳು, ‘ಚಲನಚಿತ್ರಗಳಿಗೆ ಸಬ್ಸಿಡಿ ಕೊಡುವ ಪ್ರಕ್ರಿಯೆ ಪ್ರಾರಂಭ ಆಗಿದೆ. ಹಿಂದಿನ ಸರ್ಕಾರ ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟಿರಲಿಲ್ಲ. 2019 ರಿಂದ ಸಬ್ಸಿಡಿ ಕೊಡುವ ಪ್ರಕ್ರಿಯೆ ಶುರುವಾಗಿದೆ‌. ಇದಲ್ಲದೆ ಚಿತ್ರ ನಗರಿ ಮೈಸೂರಿನಲ್ಲಿ ಆಗ್ತಿದೆ. ಈಗಾಗಲೇ ಜಮೀ‌ನು ಹಸ್ತಾಂತರ ಮಾಡಲಾಗಿದೆ. PPP ಮಾಡೆಲ್ ನಲ್ಲಿ ಚಿತ್ರನಗರಿ ನಿರ್ಮಿಸುವ ಉದ್ದೇಶವಿದ್ದು, ಅದಕ್ಕಾಗಿ 110 ಎಕರೆ ಜಾಗ ಕೊಟ್ಟಿದ್ದೇವೆ‌’ ಎಂದು ಹೇಳಿದ್ದಾರೆ.

2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
 

MORE NEWS

Unlock Raghava; ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಬಿಡುಗಡೆ ಆಯಿತು ‘ಲಾಕ್ ಲಾಕ್’ ಹಾಡು

08-01-2025 ಬೆಂಗಳೂರು

ಮಿಲಿಂದ್‍ ಮತ್ತು ರಚೆಲ್‍ ಡೇವಿಡ್‍ ಅಭಿನಯದ ‘ಅನ್‍ಲಾಕ್‍ ರಾಘವ’ ಚಿತ್ರವು ಫೆಬ್ರವ...

ಸದ್ಯ ಓಟಿಟಿಯಲ್ಲಿ ‘UI’ ಇಲ್ಲ; ಸ್ಪಷ್ಟನೆ ಕೊಟ್ಟ ನಿರ್ಮಾಪಕರು

08-01-2025 ಬೆಂಗಳೂರು

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...

ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್‍

08-01-2025 ಬೆಂಗಳೂರು

ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್‍ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ...