ವಿಶೇಷ ಚೇತನರೆಂದರೆ ಸೆಣಸಾಟಗಳೊಂದಿಗೆ ಕನಸುಗಳನ್ನು ಕಟ್ಟುವವರು

Date: 28-05-2023

Location: ಬೆಂಗಳೂರು


''ನಮ್ಮ ಬದುಕು ಉಜ್ವಲವಾಗಬೇಕೆಂದರೆ ಅದು ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ. ನಮ್ಮಂಥ ಅಂಗವಿಕಲರಿಗೆ ಹತ್ತನೇ ತರಗತಿಯವರೆಗೆ ಮಾತ್ರ ಹಾಸ್ಟೆಲ್ ವ್ಯವಸ್ಥೆ ಇದೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೆ ಎಷ್ಟೋ ಜನರು ತಮ್ಮ ಓದನ್ನು ಅಲ್ಲಿಗೆ ನಿಲ್ಲಿಸಿಕೊಳ್ಳುತ್ತಾರೆ,'' ಎನ್ನುತ್ತಾರೆ ರಾಜು ಎನ್ ದೊಡ್ಮನಿ ಮತ್ತು ಕುಮಾರ್ ಎನ್ ದೊಡ್ಮನಿ. ಅಂಕಣಗಾರ್ತಿ ಜ್ಯೋತಿ ಎಸ್. ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ವಿಶೇಷ ಚೇತನ ರಾಜು ಎನ್ ದೊಡ್ಮನಿ ಮತ್ತು ಕುಮಾರ್ ಎನ್ ದೊಡ್ಮನಿ’ ಅವರ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಬದುಕು ಅವಕಾಶಗಳ ಆಗರ. ಬಹುತೇಕರಿಗೆ ಬದುಕು ಒಳ್ಳೆಯ ಗಟ್ಟಿ ಮುಟ್ಟಾದ ಮೈಕಟ್ಟು, ಮಾತು, ನೋಟ, ಶ್ರವಣ, ಮಾನಸಿಕ ಆರೋಗ್ಯವನ್ನು ಕೊಟ್ಟು ಒಳ್ಳೆಯ ಸ್ನೇಹಿತನಾಗಿರುತ್ತದೆ. ತುಂಬ ಜನರು ಬಂದ ಅವಕಾಶಗಳನ್ನು ಗುರುತಿಸದೆ ತಮ್ಮ ಬುದ್ಧಿ ಹೀನತೆಯಿಂದ ಕೈಚೆಲ್ಲಿ ಬದುಕನ್ನು ವಿನಾಕಾರಣ ಶತ್ರುವಾಗಿಸಿಕೊಳ್ಳುತ್ತಾರೆ. ಆದರೆ ಕೆಲವರ ಪಾಲಿಗೆ ಹುಟ್ಟುತ್ತಲೇ ಬದುಕು ದೊಡ್ಡ ಶತ್ರುವಿನಂತೆ ಆಗಿರುತ್ತದೆ. ಅಂಗವೈಕಲ್ಯವನ್ನು ಶಾಶ್ವತವಾಗಿ ಅಂಟಿಸಿರುತ್ತದೆ. ಇವರ ಬೆನ್ನಿಗೆ ನಿಲ್ಲಬೇಕಾದ ಸಮಾಜ, ಸರ್ಕಾರ ಹಲವು ಕಡೆ ಇಂಥವರನ್ನು ಮೂಲೆಗುಂಪಾಗಿಸುತ್ತವೆ. ಜೀವನಪರ್ಯಂತ ಬರೀ ಸೌಲಭ್ಯಗಳಿಗಾಗಿಯೇ ಅಲೆದು ಬದುಕು ಸವೆಯುತ್ತಿರುತ್ತದೆ. ಜೀವನವೇ ಒಂದು ಹೋರಾಟವಾಗಿರುತ್ತದೆ. ಎಲ್ಲ ಸೆಣಸಾಟಗಳೊಂದಿಗೆ ಇವರು ಕನಸುಗಳನ್ನು ಹೆಣೆದಿರುತ್ತಾರೆ ಅವುಗಳ ಗುರಿ ಸಾಧನೆಗೆ ಹೋರಾಡುತ್ತಾರೆ. ಅಂಥವರ ಪರಿಚಯ ಇಂದಿನ ನಿಮ್ಮ ಓದಿಗೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ತೆರೆದಹಳ್ಳಿ ಗ್ರಾಮದ ವಿಶೇಷ ಚೇತನರಾದ ರಾಜು ಎನ್ ದೊಡ್ಮನಿ ಮತ್ತು ಕುಮಾರ್ ಎನ್ ದೊಡ್ಮನಿ. ತಾಯಿ ಗೌರಮ್ಮ ತಂದೆ ನರೇಂದ್ರ ದಂಪತಿಗಳಿಗೆ ಹುಟ್ಟಿದ ಈ ಇಬ್ಬರೂ ಮಕ್ಕಳು ವಿಶೇಷ ಚೇತನರು. ರಾಜು 80%, ಕುಮಾರ್ 85% ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ರಾಜು ಅಂಗವೈಕಲ್ಯದ ಬಗ್ಗೆ PhD ಮಾಡುವ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ. ಅವರ ಜೀವನವನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.

'ನಮ್ಮದು ರೈತ ಮನೆತನ ಅಪ್ಪ ಅಮ್ಮ ಓದಿಲ್ಲ. ಅಪ್ಪ ಅಮ್ಮ ರಕ್ತ ಸಂಬಂಧದಲ್ಲಿ ಮದುವೆಯಾಗಿರುವುದರಿಂದ ನಾವು ಹೀಗೆ ಹುಟ್ಟಿದ್ದೇವೆ ಎಂಬ ಕಾರಣವನ್ನು ವೈದ್ಯರು ಹೇಳಿದರು. ಇನ್ನು ಎಷ್ಟು ಮಕ್ಕಳಾದರೂ ಹೀಗೆ ಹುಟ್ಟುತ್ತಾರೆ ಅಂದಾಗ ಅಪ್ಪ ಅಮ್ಮ ನಮಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದ್ದಾರೆ ಅವರನ್ನೇ ಅವರು ಬದುಕಿರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳೋಣ ಅಂತ ನಿರ್ಧಾರ ಮಾಡಿದರು. ಚಿಕ್ಕಂದಿನಿಂದ ಇಲ್ಲಿಯವರೆಗೆ ಅವರು ನಮ್ಮನ್ನು ಹೂವಿನಂತೆ ನೋಡಿಕೊಳ್ಳುತ್ತ ಬಂದಿದ್ದಾರೆ. ನನ್ನ ತಮ್ಮ ಶಾಲೆಯ ಮುಖವನ್ನೂ ನೋಡಿಲ್ಲ. ಏಕೆಂದರೆ ಅವನನ್ನು ಎತ್ತಿಕೊಂಡು ಬಂದರೂ ಅವನಿಗೆ ಕೂರಲು ಆಗುವುದಿಲ್ಲ. ಏನಾದರೂ ಸಪೋರ್ಟ್ ಕೊಟ್ಟರೆ ಸ್ವಲ್ಪ ಹೊತ್ತು ಕೂರುತ್ತಾನೆ. ಅದನ್ನು ಬಿಟ್ಟರೆ ಯಾವಾಗಲು ಮಗುವಿನ ಹಾಗೆ ಮಲಗಿರುತ್ತಾನೆ. ನಾನು ಶಾಲೆಗೆ ಹೋಗಿದ್ದು ನಾಲ್ಕು ವರ್ಷ ತಡವಾಗಿ ಅಂದರೆ ಸುಮಾರು ಹತ್ತು ವರ್ಷದ ಹುಡುಗನಿರುವಾಗ ಒಂದನೇ ತರಗತಿಗೆ ಅಪ್ಪ ನನ್ನನ್ನು ಎತ್ತಿಕೊಂಡು ಹೋಗಿ ಶಾಲೆಯಲ್ಲಿ ಕೂರಿಸಿ ಬರುತ್ತಿದ್ದರು. ಒಬ್ಬ ಶಿಕ್ಷಕರು ಇವನನ್ನು ಶಾಲೆಗೆ ಕರೆದುಕೊಂಡು ಬರಬೇಡಿ ಏನಾದರೂ ತಾಗಿಸಿಕೊಳ್ಳಬಹುದು ಇಲ್ಲವೇ ಯಾರಾದರೂ ಮಕ್ಕಳು ಇವನೊಂದಿಗೆ ಜಗಳ ಮಾಡಬಹುದು ಅಂತ ಅನುಕಂಪದಿಂದ ಹೇಳಿದರು. ಆಗ ನನ್ನ ಅಣ್ಣ ಅಕ್ಕನ (ದೊಡ್ಡಪ್ಪನ ಮಕ್ಕಳು) ಪುಸ್ತಕವನ್ನು ನೋಡಿ ಅವರು ಓದುವಾಗ ಕೇಳಿಸಿಕೊಂಡು ಅಪ್ಪನ ಹತ್ತಿರ ಮಗ್ಗಿ ಪುಸ್ತಕ ತರಿಸಿಕೊಂಡು ಸ್ವರ ವ್ಯಂಜನ ಕಾಗುಣಿತ ಮಗ್ಗಿ ಕಲಿತುಕೊಂಡೆ. ಒಮ್ಮೆ ನಮ್ಮೂರಿಗೆ ಸಾಕ್ಷರತಾ ಅಭಿಯಾನದವರು ಬಂದಿದ್ದರು ಅವರ ಗಮನಕ್ಕೆ ನಾವಿಬ್ಬರು ಬಂದ್ವಿ. ಅವರ ಸಹಾಯದಿಂದ ನನಗೆ ವೀಲ್ ಚೇರ್ ಸಿಕ್ತು. ಆಗ ನಾನು ಶಾಲೆಗೆ ಖುಷಿಯಿಂದ ಹೋಗುತ್ತಿದ್ದೆ. ಆದರೆ ಶಾಲೆಗೆ ಹೋದರೆ ಬೇಜಾರು ಆಗುತ್ತಿತ್ತು ಒಬ್ಬ ಸರ್ ನೀನು ಬರಬೇಡ ಅಂತಿದ್ರು, ಜಿ. ಟಿ. ಮುಲ್ಲಾನವರ್ ಸರ್ ಮಾತ್ರ ನೀನು ಶಾಲೆಗೆ ಬಾ ನೀನು ಚೆನ್ನಾಗಿ ಓದು ಅಂತ ಹೇಳ್ತಾ ಇದ್ದರು. ಆದ್ದರಿಂದ ನಾಲ್ಕನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗೆ ಓದಲು ಸಾಧ್ಯವಾಯ್ತು. ಹತ್ತನೇ ತರಗತಿಗೆ ಹೋಗುವಷ್ಟರಲ್ಲಿ ನಾನು ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಪರೀಕ್ಷೆ ಕಟ್ಟೋಕೆ ಸಹ ಆಗಲಿಲ್ಲ. ಅಲ್ಲಿಂದ ಅನಾರೋಗ್ಯ ಕಾಡಲು ಶುರುವಾಯಿತು. ಅಲ್ಲಿಗೆ ನಾನು ಚೆನ್ನಾಗಿ ಓದಬೇಕು ಎನ್ನುವ ಕನಸು ಮಣ್ಣಾಯಿತು. ಇನ್ನುಮುಂದೆ ಓದುವುದು ಅಸಾಧ್ಯ ಅಂತ ತಿಳಿದು ತುಂಬ ಅತ್ತೆ. ಒಂದಷ್ಟು ದಿನ ಊಟ ಬಿಟ್ಟೆ. 2014 - 2015ರಲ್ಲಿ ವೊಡಾಫೋನ್, ಏರ್ಟೆಲ್, ಐಡಿಯ ಸಿಮ್ ಕಾರ್ಡ್ ರಿಟೇಲರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಜೊತೆಗೆ 2017 - 2018 ರಲ್ಲಿ DTH ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿದೆ. 2020ರಲ್ಲಿ ಲಾಕ್ ಡೌನ್ ನಿಂದಾಗಿ ವ್ಯವಹಾರಕ್ಕೆ ಹೊಡೆತ ಬಿದ್ದು ನಾನು ಆ ಕೆಲಸವನ್ನು ಅಲ್ಲಿಗೆ ಕೈ ಬಿಟ್ಟೆ'.

'ಶಾಲಾ ದಿನಗಳಲ್ಲಿ ನನಗೆ ಒಂಟಿತನ ತುಂಬ ಕಾಡ್ತಾ ಇತ್ತು. ಎಲ್ಲಾ ಮಕ್ಕಳು ಫುಟ್ಬಾಲ್, ವಾಲಿಬಾಲ್ ಆಡ್ತಾ ಇದ್ದರೆ ನಾನು ನೋಡ್ತಾ ಕುಳಿತಿರುತ್ತಿದ್ದೆ. ಆಗೆಲ್ಲ ನನಗೆ ಯಾವ ಆಸ್ತಿ ಬೇಡ, ಐಶ್ವರ್ಯ ಬೇಡ ಎಲ್ಲರಂತೆ ನನ್ನ ಕಾಲು ಸರಿಯಿದ್ದಿದ್ದರೆ ನಾನು ಎಲ್ಲರಂತೆ ಇರಬಹುದಿತ್ತು ಅಂತ ಅನಿಸುತ್ತಿತ್ತು. ನಮ್ಮ ಬದುಕು ಉಜ್ವಲವಾಗಬೇಕೆಂದರೆ ಅದು ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ. ನಮ್ಮಂಥ ಅಂಗವಿಕಲರಿಗೆ ಹತ್ತನೇ ತರಗತಿಯವರೆಗೆ ಮಾತ್ರ ಹಾಸ್ಟೆಲ್ ವ್ಯವಸ್ಥೆ ಇದೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೆ ಎಷ್ಟೋ ಜನರು ತಮ್ಮ ಓದನ್ನು ಅಲ್ಲಿಗೆ ನಿಲ್ಲಿಸಿಕೊಳ್ಳುತ್ತಾರೆ. ಸರ್ಕಾರದಿಂದ ಸುಮಾರು ಸವಲತ್ತುಗಳಿವೆ. ನಾವು ಯಾವುದೇ ಮೂಲಭೂತ ಸೌಕರ್ಯಗಳನ್ನು ಪಡೆಯಲು ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಬೇಕು. ಒಮ್ಮೆ ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಲು ಅಪ್ಪ ಅಮ್ಮನ ಜೊತೆಗೆ ನಾನು ಮತ್ತು ನನ್ನ ತಮ್ಮ ಆಸ್ಪತ್ರೆಗೆ ಹೋಗಿದ್ದೆವು. ನಾನು ಕೈ ಊರಿ ನಡೆದುಕೊಂಡು ಹೋಗುವುದನ್ನು ನೋಡಿದರೂ ಚೇರ್ ಮೇಲೆ ಹತ್ತು, ತೂಕ ಎತ್ತು ಎಂದರು. ಇನ್ನು ನನ್ನ ತಮ್ಮ ಮಗುವಿನಂತೆ ಇದ್ದಾನೆ. ಅವನು ಕೂರೋದು ಇಲ್ಲ. ಅವನನ್ನು ಯಾರಾದರೂ ಎತ್ತಿಕೊಂಡೆ ಹೋಗಬೇಕು. ನಿಜವಾದ ಅಂಗವಿಕಲರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುತ್ತಾರೆ. ನಮ್ಮ ಪರಿಸ್ಥಿತಿ ಹೀಗಿರುವಾಗ... ಕೆಲವರು ಚೆನ್ನಾಗಿ ನಡೀತಾ ಇದ್ದರೂ ಕಾಲು ಕೈ ಸ್ವಲ್ಪ ಏನಾದರೂ ಆಗಿದ್ರೂ 75% ಅಂಗವೈಕಲ್ಯ ಅಂತ ಹಾಕಿ ಅವರನ್ನು ಸ್ಪರ್ಶ ಕೂಡ ಮಾಡದೇ ವೈದ್ಯರು ಸರ್ಟಿಫಿಕೇಟ್ ಕೊಟ್ಟು ಕಳಿಸುತ್ತಾರೆ. ನಿಜವಾದ ಅಂಗವಿಕಲರು ಯಾರು ಅಂತ ತಿಳಿದುಕೊಳ್ಳದೆ ಇಂತಹ ಕೆಲಸಗಳು ನಡೆಯುತ್ತಿವೆ. ಸವಲತ್ತುಗಳನ್ನು ಪಡೆದುಕೊಳ್ಳುವ ಎಲ್ಲಾ ಅರ್ಹತೆಗಳಿದ್ದರೂ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ನೆಲಮಹಡಿ ಬಿಟ್ಟು ಬೇರೆ ಮಹಡಿಗಳಲ್ಲಿ ತರಗತಿಗಳು ಇದ್ದರೆ ಲಿಫ್ಟ್ ಸೌಲಭ್ಯ ಮಾಡಿದರೆ ನನ್ನಂತ ಹಲವಾರು ಮಂದಿಗೆ ಉನ್ನತ ಶಿಕ್ಷಣ ಕಲಿಯಲು ಸಹಾಯವಾಗುತ್ತದೆ. ಹಾಗೂ ನಮ್ಮನ್ನು ಕನಿಕರದಿಂದ ನೋಡುವುದು ಬೇಡ. ಅನುಕಂಪ ಬೇಡ ಅವಕಾಶ ಬೇಕು. ಸ್ವಂತ ಉದ್ಯೋಗ ಮಾಡಲು ತರಬೇತಿ ಮತ್ತು ಸಾಲ ಸೌಲಭ್ಯ ಮಾಡಿ ಕೊಟ್ಟರೆ ನಾವು ಕೂಡ ಸ್ವಉದ್ಯೋಗಿಗಳಾಗಬಹುದು. ಸ್ವಾವಲಂಬಿಗಳಾಗಿ ಬದುಕಬಹುದು' ಎನ್ನುತ್ತಾರೆ‌‌'.

ಅಂಗವಿಕಲತೆಯಿಂದ ಒಬ್ಬರೇ ಓಡಾಡೋದು ಕಷ್ಟ. ಇನ್ನೊಬ್ಬರು ಇವರ ಸಹಾಯಕ್ಕೆ ಬೇಕೆ ಬೇಕು. ದೊಡ್ಡ ಕನಸು ಹೊತ್ತ ರಾಜು ಒಂದೂರಿನಿಂದ ಇನ್ನೊಂದು ಊರಿಗೆ ಓದಲು ಹೋಗುವುದು ಅಸಾಧ್ಯ. ಇವರದು ರೈತ ಕುಟುಂಬವಾದ್ದರಿಂದ ಮನೆಯವರು ಹೊಲದ ಕೆಲಸ ಮಾಡುತ್ತಾರೆ ಇಲ್ಲದಿದ್ದರೆ ಬದುಕು ನಡೆಯುವುದಿಲ್ಲ, ಹಾಗಾಗಿ ಅವರು ದಿನವೂ ಇವರ ಸಹಾಯಕ್ಕೆ ಬರುವುದು ಕಷ್ಟ. ಕಲಿಯುವ ಹಂಬಲ, ತುಡಿತ, ಸಾಧಿಸುವ ಛಲ ಇದೆ ಆದರೆ ಬೇರೆಡೆಗೆ ಬಸ್ ಹಿಡಿದು ಹೋಗಿಬರಲು ಅಸಾಧ್ಯ. ಇಂತಹ ಗಂಭೀರ ತೊಂದರೆ ಇರುವವರ ಮನೆಗೆ ಸರ್ಕಾರ ಶಿಕ್ಷಕರನ್ನು ಕಳಿಸಿ ಪಾಠ ಮಾಡುವ ಯೋಜನೆಯನ್ನು ತಂದು ಅವರ ಓದುವ ಕನಸುಗಳನ್ನು ನನಸು ಮಾಡುವಲ್ಲಿ ಮುಂದಾಗಬೇಕು. ಇವರನ್ನು ನಾವು ಗೌರವದಿಂದ ಕಾಣಬೇಕು ಇವರನ್ನು ಕುಗ್ಗಿಸುವ ಮಾತುಗಳನ್ನು ಆಡಬಾರದು. ಮಾನ್ಯ ಪ್ರಧಾನಮಂತ್ರಿಗಳು ಇಂಥವರನ್ನು ದಿವ್ಯಾಂಗರು ಎಂದು ಕರೆದಿದ್ದಾರೆ. ಇವರು ಕೂಡ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗ ಎಂಬುದನ್ನು ನಾವು ಮರೆಯಬಾರದು. ಇವರ ಮುಂದಿನ ಬದುಕು ಖುಷಿಯಿಂದಿರಲಿ. ಇವರು ಅಂದುಕೊಂಡ ಎಲ್ಲ ಕೆಲಸಗಳು ಕೈಗೂಡಲಿ ಎಂದು ಆಶಿಸೋಣ.


ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...