ವಿಜಯಭಾಸ್ಕರ್ ಅವರೊಂದಿಗೆ ಹತ್ತಿರದಿಂದ ಒಡನಾಡಿದ ಎಲ್ಲ ನೆನಪುಗಳೂ ಇಲ್ಲಿ ಮೂಡಿವೆ


"ವಿಜಯಭಾಸ್ಕರ್ ಅವರ ಜೀವನದ ವಿವಿಧ ಮಜಲುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಮೊದಲಿಗೆ ನೀಡಿರುವ ರಾಗಗಳ ಹುಟ್ಟು, ಬಳಕೆ ಪ್ರಭಾವಗಳನ್ನು ತಿಳಿಸಿಕೊಟ್ಟಿರುವ ರೀತಿಯು ಸಂಗೀತ ಬಾರದ ನನ್ನಂಥವರಿಗೂ ಇಷ್ಟವಾಗುತ್ತದೆ. ಶ್ರೀಧರಮೂರ್ತಿಯವರೆಂದರೆ ಚಲನಚಿತ್ರಗಳ ಬಗ್ಗೆ, ಏನೇ ಮಾಹಿತಿ ಬೇಕಾದರೂ ನಡೆದಾಡುವ ವಿಶ್ವಕೋಶದಂತೆ," ಎನ್ನುತ್ತಾರೆ ಸುಬ್ಬಲಕ್ಷ್ಮಿ ಹೆಚ್. ಕೆ. ಕೋಲಾರ. ಅವರು ಎನ್. ಎಸ್. ಶ್ರೀಧರಮೂರ್ತಿ ಅವರ ‘ಎಲ್ಲೆಲ್ಲು ಸಂಗೀತವೇ’ ಕೃತಿ ಕುರಿತು ಬರೆದ ಅನಿಸಿಕೆ.

ಕೃತಿ: ಎಲ್ಲೆಲ್ಲು ಸಂಗೀತವೇ
ಲೇ: ಎನ್. ಎಸ್. ಶ್ರೀಧರಮೂರ್ತಿ
ಪ್ರಕಾಶಕರು: ವೀರಲೋಕ ಪ್ರಕಾಶನ ಬೆಂಗಳೂರು
ಪುಟಗಳು: 156
ಬೆಲೆ: 195
ದೂರವಾಣಿ ಸಂಖ್ಯೆ: 7022122121

ಎನ್. ಎಸ್. ಶ್ರೀಧರಮೂರ್ತಿಯವರ ಮಾತುಗಳ ಒಂದು ಕ್ಲಿಪ್ ಆತ್ಮೀಯರೊಬ್ಬರಿಂದ ಬಂತು. ಕೇಳುತ್ತಾ ಹೋದಂತೆ ಅದು ಚಲನಚಿತ್ರ ರಂಗದ ಸಂಗೀತ ಸಂಯೋಜಕರಾಗಿದ್ದ ಶ್ರೀಯುತ ವಿಜಯಭಾಸ್ಕರ್ ಅವರನ್ನು ಕುರಿತಾಗಿತ್ತು. ಆಗ ಈ ಪುಸ್ತಕವನ್ನು ಓದಲೇಬೇಕೆಂಬ ಬಯಕೆ ಮೂಡಿತು. ತಕ್ಷಣ ತರಿಸಿಕೊಂಡೆ. ಓದತೊಡಗಿದೆ. ಕೆಳಗಿಡಲು ಮನಸ್ಸೇ ಬರಲಿಲ್ಲ. ಅಂತಹಾ ಒಂದು ಅದ್ವಿತೀಯ ಲೋಕಕ್ಕೆ ಸೆಳೆದೊಯ್ದ ಕೃತಿಯಿದು.

ವಿಜಯಭಾಸ್ಕರ್ ಅವರ ಜೀವನದ ವಿವಿಧ ಮಜಲುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಮೊದಲಿಗೆ ನೀಡಿರುವ ರಾಗಗಳ ಹುಟ್ಟು, ಬಳಕೆ ಪ್ರಭಾವಗಳನ್ನು ತಿಳಿಸಿಕೊಟ್ಟಿರುವ ರೀತಿಯು ಸಂಗೀತ ಬಾರದ ನನ್ನಂಥವರಿಗೂ ಇಷ್ಟವಾಗುತ್ತದೆ. ಶ್ರೀಧರಮೂರ್ತಿಯವರೆಂದರೆ ಚಲನಚಿತ್ರಗಳ ಬಗ್ಗೆ, ಏನೇ ಮಾಹಿತಿ ಬೇಕಾದರೂ ನಡೆದಾಡುವ ವಿಶ್ವಕೋಶದಂತೆ. ಅವರು ವಿಜಯಭಾಸ್ಕರ್ ಅವರೊಂದಿಗೆ ಹತ್ತಿರದಿಂದ ಒಡನಾಡಿದ ಎಲ್ಲ ನೆನಪುಗಳೂ ಇಲ್ಲಿ ಮೂಡಿವೆ.

ಚಿತ್ರರಂಗ ಬೆಳೆದುಬಂದ ಬಗೆ, ಚಲನಚಿತ್ರ ಗೀತೆಗಳ ರಚನೆ, ಅದಕ್ಕೆ ಸಂಗೀತ ಸಂಯೋಜನೆ, ವಿಶೇಷ ಗೀತೆಗಳು ರೂಪುಗೊಂಡ ಸಂದರ್ಭ, ಚಿತ್ರಗಳ ನಿರ್ಮಾಣ, ಹೊಸ ಹೊಸ ಪ್ರತಿಭೆಗಳ ಶೋಧ, ಕಲಾವಿದರನ್ನು ಬೆಳೆಸಿದ್ದು, ಎಲ್ಲ ಸಂಗತಿಗಳೂ ವಿವರವಾಗಿ ಇಲ್ಲಿ ಬಂದಿವೆ. ಓದುತ್ತಾ ಹೋದಂತೆ ನೋಡಿದ ಚಿತ್ರಗಳು ಕಣ್ಣ ಮುಂದೆ ಬಂದರೆ ನೋಡದ ಚಿತ್ರಗಳ ಪಟ್ಟಿ ತಯಾರಾಗುತ್ತಾ ಬಂತು. ಅನೇಕ ಗೀತೆಗಳನ್ನು ಮತ್ತೆ ಮತ್ತೆ ಕೇಳುವ, ದೃಶ್ಯಗಳನ್ನು ನೋಡುವ ಪ್ರೇರಣೆ ಮೂಡಿತು. ಕಲಾವಿದರ ಬದುಕು ತೆರೆದ ಪುಸ್ತಕವಾದಂತೆ, ಭಾವನೆಗಳಿಗೆ ರೆಕ್ಕೆ ಮೂಡಿದಂತೆ ಭಾಸ.

ಇಲ್ಲಿ ಅಳವಡಿಸಿರುವ ವಿಶೇಷ ಛಾಯಾಚಿತ್ರಗಳಿಗೆ ಸಣ್ಣ ಪರಿಚಯದ ವಿವರಣೆ ಕೊಟ್ಟಿದ್ದರೆ ಚೆನ್ನಿತ್ತು. ಅಲ್ಲಲ್ಲಿ ಸಣ್ಣ ಮುದ್ರಣದೋಷಗಳು ಇವೆ. ಮುಂದಿನ ಮುದ್ರಣದಲ್ಲಿ ಸ್ವಲ್ಪ ಗಮನಿಸಬಹುದು. ಅನುಬಂಧಗಳು ಉಪಯುಕ್ತ ಮಾಹಿತಿಯನ್ನು ಹೊಂದಿದ್ದು ಸಂಗ್ರಹಯೋಗ್ಯವಾಗಿವೆ. ಸುಮಧುರ ಗೀತೆಗಳ ನಿನಾದದ ಗುಂಗು ತುಂಬಿಕೊಂಡಿದೆ. ವಿವರಿಸಿರುವ ಪ್ರತಿಯೊಂದು ಸಂದರ್ಭವೂ ಕಣ್ಣಿಗೆ ಕಟ್ಟುವಂತಿದೆ. ಬಳಸಿರುವ ಭಾಷೆ ಅಂತದು.

- ಸುಬ್ಬಲಕ್ಷ್ಮಿ ಹೆಚ್. ಕೆ. ಕೋಲಾರ

MORE FEATURES

ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ

02-01-2025 ಬೆಂಗಳೂರು

“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...

ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ

02-01-2025 ಬೆಂಗಳೂರು

"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...

ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿ

02-01-2025 ಬೆಂಗಳೂರು

“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...